ADVERTISEMENT

ಕ್ಷಿಪಣಿ ಪರೀಕ್ಷೆ: ಸಂಯಮಕ್ಕೆ ಅಣ್ವಸ್ತ್ರ ರಾಷ್ಟ್ರಗಳಿಗೆ ಅಮೆರಿಕ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ವಾಷಿಂಗ್ಟನ್ (ಪಿಟಿಐ): ವಾರದ ಅಂತರದಲ್ಲಿ ಭಾರತ ಹಾಗೂ ಪಾಕಿಸ್ತಾನಗಳು ನಡೆಸಿದ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳ ಯಶಸ್ವಿ ಪರೀಕ್ಷೆಯ ಸಂಬಂಧ ಅಣ್ವಸ್ತ್ರ ಶಕ್ತ ರಾಷ್ಟ್ರಗಳು ಸಂಯಮ ಕಾಯ್ದುಕೊಳ್ಳುವಂತೆ ಅಮೆರಿಕ ಸಲಹೆ ಮಾಡಿದೆ.

ಪಾಕಿಸ್ತಾನದಲ್ಲಿ ನಡೆದ ಯಶಸ್ವಿ ಕ್ಷಿಪಣಿ ಪರೀಕ್ಷೆ ಕುರಿತ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ವಕ್ತಾರೆ ವಿಕ್ಟೋರಿಯಾ ನುಲಂದ್, ಭಾರತ ಅಗ್ನಿ-5 ಖಂಡಾಂತರ ಕ್ಷಿಪಣಿ ಉಡಾವಣೆ ನಡೆಸಿದಾಗಲೂ ನಾವು ಇದೇ ಸಂದೇಶವನ್ನು ಅಣ್ವಸ್ತ್ರ ಶಕ್ತ ರಾಷ್ಟ್ರಗಳಿಗೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ಈ ಎರಡೂ ರಾಷ್ಟ್ರಗಳಲ್ಲಿ ನಡೆದಿರುವ ಕ್ಷಿಪಣಿ ಪರೀಕ್ಷೆ ಪೂರ್ವ ಯೋಜಿತ ಎಂಬುದು ಸ್ಪಷ್ಟವಾಗಿದೆ. ಆದರೂ ಪಾಕಿಸ್ತಾನ ತನ್ನ ಪ್ರಯೋಗವನ್ನು ಭಾರತದ ಕ್ಷಿಪಣಿ ಪ್ರಯೋಗಕ್ಕೆ ಪ್ರತಿಯಾಗಿ ಅಲ್ಲ ಎಂದು ಹೇಳಿದೆ ಎಂದು ನುಲಂದ್ ತಿಳಿಸಿದ್ದಾರೆ.

ADVERTISEMENT

`ಈ ವಿದ್ಯಮಾನಗಳಲ್ಲಿ ಗಮನಿಸಬೇಕಾದ ಅಂಶವೆಂದರೆ, ಪಾಕಿಸ್ತಾನ ಕ್ಷಿಪಣಿ ಉಡಾವಣೆಗೆ ಮುನ್ನ ಭಾರತಕ್ಕೆ ಮಾಹಿತಿ ನೀಡಿದೆ. ಈ ರೀತಿಯಲ್ಲಾದರೂ ಉಭಯ ರಾಷ್ಟ್ರಗಳು ಒಂದಾಗಿ ಕಾರ್ಯ ನಿರ್ವಹಿಸುವ ಮೂಲಕ , ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲಿ~ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.