ADVERTISEMENT

ಖರ್ಗೆಗೆ ಅಮೆರಿಕದಲ್ಲಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ವಾಷಿಂಗ್ಟನ್ (ಪಿಟಿಐ): ಇಲ್ಲಿನ ಭಾರತೀಯ-ಅಮೆರಿಕನ್ ಸಮುದಾಯವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಅವರಿಗೆ `ಪ್ರೈಡ್ ಆಫ್ ಇಂಡಿಯಾ~ ಪ್ರಶಸ್ತಿ ನೀಡಿ ಗೌರವಿಸಿದೆ.

ಇಲ್ಲಿಗೆ ಭೇಟಿ ನೀಡಿರುವ ಕನ್ನಡಿಗರಾದ ಖರ್ಗೆಯವರ ಗೌರವಾರ್ಥ ಡಲ್ಲಾಸ್‌ನಲ್ಲಿ ವಾರಾಂತ್ಯ ನಡೆದ ಸಂತೋಷ ಕೂಟದಲ್ಲಿ ಭಾರತೀಯ ಅಮೆರಿಕನ್ ಸ್ನೇಹ ಮಂಡಳಿ (ಐ ಎ ಎಫ್ ಸಿ) ಮತ್ತು ಉತ್ತರ ಟೆಕ್ಸಾಸ್‌ನ ಭಾರತೀಯ ಸಂಘ (ಐಎಎನ್‌ಟಿ) ಜಂಟಿಯಾಗಿ ಈ ಪ್ರಶಸ್ತಿಯನ್ನು  ಪ್ರದಾನ ಮಾಡಿದವು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಖರ್ಗೆ ಅವರು ಗಣಿ ಸುರಕ್ಷತೆ, ಉದ್ಯೋಗ, ಸಾಮಾಜಿಕ ಭದ್ರತೆ ಮತ್ತಿತರ ಪರಸ್ಪರ ಹಿತಾಸಕ್ತಿಯ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ದ್ವಿಪಕ್ಷೀಯ ಒಪ್ಪಂದಗಳನ್ನು ಪ್ರಸ್ತಾಪಿಸಿ, ಭಾರತದ ಜಿಡಿಪಿಯು ಇತರ ರಾಷ್ಟ್ರಗಳಿಗಿಂತ ಅತಿ ವೇಗವಾಗಿ ಬೆಳೆಯುತ್ತಿರುವುದರ ಬಗ್ಗೆ ಮಾಹಿತಿ ನೀಡಿದರು.
 
ಮಕ್ಕಳ ಶಿಕ್ಷಣದ ಸುಧಾರಣೆ,  ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸಮುದಾಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಸಚಿವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.