ADVERTISEMENT

ಗಡಾಫಿ ಬ್ಯಾಂಕ್ ಠೇವಣಿ 200 ಶತಕೋಟಿ ಡಾಲರ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ವಾಷಿಂಗ್ಟನ್ (ಪಿಟಿಐ):  ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿ  ವಿವಿಧ ದೇಶಗಳಲ್ಲಿ ಸುಮಾರು 200 ಶತಕೋಟಿ ಡಾಲರ್(ಸುಮಾರು 1 ಲಕ್ಷ ಕೋಟಿ ರೂಪಾಯಿ) ಹಣ ರಹಸ್ಯವಾಗಿ ಇಟ್ಟಿರುವುದು ಪತ್ತೆಯಾಗಿದೆ.

ಗಡಾಫಿ ಈ ಹಣವನ್ನು ವಿಶ್ವದ ವಿವಿಧ ದೇಶಗಳ ಬ್ಯಾಂಕ್‌ಗಳು, ರಿಯಲ್ ಎಸ್ಟೇಟ್ ಮತ್ತು ಉದ್ದಿಮೆಗಳಲ್ಲಿ ಹೂಡಿಕೆ ಮಾಡಿರು ವುದಾಗಿ ಅಂದಾಜು ಮಾಡಲಾಗಿದೆ. ಅಪಾರ ಪ್ರಮಾಣದ ನಗದು, ಚಿನ್ನಾಭರಣಗಳನ್ನು ಬ್ಯಾಂಕ್‌ಗಳಲ್ಲಿ ಇಟ್ಟಿದ್ದು, ದೊಡ್ಡ ಮೊತ್ತದ ಹಣವನ್ನು ವಿವಿಧ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಕುರಿತೂ ಮಾಹಿತಿ ಸಂಗ್ರಹಿಸಲಾಗಿದೆ ಎಂದು `ಲಾಸ್‌ಏಂಜಲಿಸ್ ಟೈಮ್ಸ~ ವರದಿ ಮಾಡಿದೆ.

ಈ ಹಿಂದೆ ಪಾಶ್ಚಿಮಾತ್ಯ ದೇಶಗಳು ಗಡಾಫಿ ಹೂಡಿಕೆ ಹಾಗೂ ಬ್ಯಾಂಕ್‌ಗಳಲ್ಲಿ ರಹಸ್ಯವಾಗಿ ಇಟ್ಟಿದ್ದ ಹಣದ ಬಗ್ಗೆ ಮಾಹಿತಿ ಕಲೆ ಹಾಕುವುದರ ಜತೆಗೆ ಭಾರತ, ಚೀನಾ ಮತ್ತು ರಷ್ಯಾಗಳಲ್ಲಿ ಆತನ ಹೂಡಿಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ಮಾಡಿದ್ದವು.

ಅಮೆರಿಕದಲ್ಲಿಯೇ ಸುಮಾರು 37 ಶತಕೋಟಿ ಡಾಲರ್ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಮು ಅಮ್ಮರ್ ಗಡಾಫಿ ಇಟ್ಟಿರುವ ಬಗ್ಗೆ ಕಳೆದ ವರ್ಷ ಮಾಹಿತಿ ಪಡೆದ ಅಧಿಕಾರಿಗಳು ದಂಗಾಗಿದ್ದರು.

ಇದೇ ರೀತಿ ಫ್ರಾನ್ಸ್, ಬ್ರಿಟನ್, ಜರ್ಮನಿ ಮತ್ತು ಇಟಲಿ ಬ್ಯಾಂಕ್‌ಗಳಲ್ಲಿ ಗಡಾಫಿ ರಹಸ್ಯವಾಗಿ ಇಟ್ಟಿದ್ದ 30 ಶತನೋಟಿ ಹಣವನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.