ನ್ಯೂಯಾರ್ಕ್ (ಪಿಟಿಐ): ಗಾಲಿ ಕುರ್ಚಿಯಲ್ಲಿ ಬಂದ ವ್ಯಕ್ತಿಯೊಬ್ಬ ಇಲ್ಲಿನ ಬ್ಯಾಂಕ್ ಒಂದರಿಂದ 1,200 ಡಾಲರ್ (ಸುಮಾರು ₹76 ಸಾವಿರ) ದೋಚಿದ ಘಟನೆ ನಡೆದಿದೆ. ಐಲ್ಯಾಂಡ್ ಸಿಟಿಯಲ್ಲಿರುವ ಬ್ಯಾಂಕಿಗೆ ಸುಮಾರು 20 ವರ್ಷದ ವ್ಯಕ್ತಿಯೊಬ್ಬ ಗಾಲಿ ಕುರ್ಚಿಯಲ್ಲಿ ಬಂದು 1,200 ಡಾಲರ್ ನೀಡುವಂತೆ ಕ್ಯಾಷಿಯರ್‌ಗೆ ಒತ್ತಾಯ ಮಾಡಿದ್ದಾನೆ.
ಆಗ ಕ್ಯಾಷಿಯರ್, ಆರೋಪಿಗೆ ಸುಮಾರು 1,200 ಡಾಲರ್ ನೀಡಿದ್ದಾರೆ. ಅದನ್ನು ಪಡೆದುಕೊಂಡು ಆರೋಪಿ ಗಾಲಿ ಕುರ್ಚಿಯಲ್ಲೇ ಪರಾರಿಯಾಗಿದ್ದಾನೆ. ಗಾಲಿ ಕುರ್ಚಿಯಲ್ಲಿ ಆತ ಎಷ್ಟೊಂದು ವೇಗವಾಗಿ ಸಾಗಿದ್ದ ಎಂದರೆ ಪೊಲೀಸರು ಹೆಲಿಕಾಪ್ಟರ್‌ನಲ್ಲಿ ಬರುವ ಹೊತ್ತಿಗಾಗಲೇ ಆತನ ಸುಳಿವೇ ಇರಲಿಲ್ಲ. ಆದರೆ ಆರೋಪಿಯ ಚಿತ್ರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ನನ್ನ ಬಳಿ ಬಂದೂಕು ಇದೆ’ ಎಂದು ಆರೋಪಿ ಹೇಳಿದ. ಹೀಗಾಗಿ ನಾನು ಹಣ ನೀಡಿದೆ’ ಎಂದು ಕ್ಯಾಷಿಯರ್ ಹೇಳಿದ್ದಾರೆ. ಆರೋಪಿ ಬಂದೂಕನ್ನು ಹೊರಗೆ ತೋರಿಸಲೇ ಇಲ್ಲ ಎಂದು ಬ್ಯಾಂಕ್‌ನ ಉಳಿದ ಸಿಬ್ಬಂದಿ ತಿಳಿಸಿದ್ದಾರೆ. ಬ್ಯಾಂಕ್ ದೋಚಿದಾತ ನಿಜಕ್ಕೂ ಅಂಗವಿಕಲನೇ ಅಥವಾ ಆತ ಹಾಗೆ ನಟಿಸಿದ್ದನೇ ಎಂಬ ಬಗ್ಗೆಯೂ ಗೊಂದಲ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.