ADVERTISEMENT

ಗುರುತು ದೃಢೀಕರಣ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 20:11 IST
Last Updated 7 ಏಪ್ರಿಲ್ 2018, 20:11 IST
ಗುರುತು ದೃಢೀಕರಣ ಕಡ್ಡಾಯ
ಗುರುತು ದೃಢೀಕರಣ ಕಡ್ಡಾಯ   

ವಾಷಿಂಗ್ಟನ್: ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ.

‘ಜಾಹೀರಾತಿಗೆ ಹಣ ಪಾವತಿಸಿದವರ ಗುರುತು ಮತ್ತು ಸ್ಥಳ ಪರಿಶೀಲಿಸಿ ದೃಢೀಕರಿಸಿಕೊಳ್ಳುವುದು ಕಡ್ಡಾಯ. ಅಲ್ಲಿಯರವರೆಗೆ ರಾಜಕೀಯ ಜಾಹೀರಾತುಗಳನ್ನು
ಪ್ರಕಟಿಸುವುದಿಲ್ಲ’ ಎಂದು ಅದು ತಿಳಿಸಿದೆ.

‘ಫೇಸ್‌ಬುಕ್ ಪುಟದಲ್ಲಿ ಮೇಲಿನ ಎಡ ಅಂಚಿನಲ್ಲಿ ಜಾಹೀರಾತು ಪ್ರಕಟವಾಗಲಿದ್ದು, ಅದನ್ನು ರಾಜಕೀಯ ಜಾಹೀರಾತು ಎಂದು ಸ್ಪಷ್ಟವಾಗಿ ಗುರ್ತಿಸಲಾಗುವುದು. ಹಣ ಪಾವತಿಸಿದವರ ಮಾಹಿತಿಯನ್ನೂ ನೀಡಲಾಗುವುದು’ ಎಂದು ಹೇಳಿದೆ.

ADVERTISEMENT

‘ದೃಢೀಕರಣ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಅಮೆರಿಕದಲ್ಲಿ ಹೊಸ ಪ್ರಯೋಗ ಜಾರಿಗೆ ಬರಲಿದೆ. ದೃಢೀಕರಣಕ್ಕೆ ಒಳಗಾಗದ ಜಾಹೀರಾತು ಕಂಡರೆ ಬಳಕೆದಾರರು ಮಾಹಿತಿ ನೀಡಬಹುದು’ ಎಂದು ತಿಳಿಸಿದೆ.

‘ದೊಡ್ಡ ಪ್ರಮಾಣದಲ್ಲಿ ಫಾಲೋವರ್ಸ್ ಹೊಂದಿರುವ ಪುಟ ನಿರ್ವಹಣೆ ಮಾಡುತ್ತಿರುವವರೂ ಪರಿಶೀಲನೆಗೆ ಒಳಗಾಗುವುದು ಅಗತ್ಯ. ಇಲ್ಲದಿದ್ದರೆ ಆ ಪುಟಗಳಲ್ಲಿ ಬರಹ ಪ್ರಕಟಿಸಲು ಅವಕಾಶ ಇರುವುದಿಲ್ಲ. ನಕಲಿ ಖಾತೆ ಬಳಸಿ ಕಾರ್ಯನಿರ್ವಹಿಸುವುದಕ್ಕೆ ಇದು ತಡೆ ಹಾಕಲಿದೆ’ ಎಂದು ಪ್ರಕಟಿಸಿದೆ.

ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕದ್ದ ಕೇಂಬ್ರಿಜ್ ಅನಲಿಟಿಕಾ, ಚುನಾವಣಾ ತಂತ್ರಗಳನ್ನು ರೂಪಿಸಿರುವ ಹಗರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಫೇಸ್‌ಬುಕ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಕಾಂಗ್ರೆಸ್‌ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.