ADVERTISEMENT

ಗ್ರೀನ್‌ಕಾರ್ಡ್‌ಗಾಗಿ ಭಾರತೀಯರು 151 ವರ್ಷ ಕಾಯಬೇಕು

ಅಮೆರಿಕದಲ್ಲಿ ಶಾಶ್ವತವಾಗಿ ನೆಲಸಲು, ಉದ್ಯೋಗ ಮಾಡಲು ಅನುಮತಿ

ಪಿಟಿಐ
Published 17 ಜೂನ್ 2018, 19:30 IST
Last Updated 17 ಜೂನ್ 2018, 19:30 IST
ಗ್ರೀನ್‌ಕಾರ್ಡ್‌ಗಾಗಿ ಭಾರತೀಯರು 151 ವರ್ಷ ಕಾಯಬೇಕು
ಗ್ರೀನ್‌ಕಾರ್ಡ್‌ಗಾಗಿ ಭಾರತೀಯರು 151 ವರ್ಷ ಕಾಯಬೇಕು   

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಮತ್ತು ಕೆಲಸ ಮಾಡಲು ಅವಕಾಶ ಮಾಡಿಕೊಡುವ ಗ್ರೀನ್ ಕಾರ್ಡ್ ಪಡೆಯಲು ಸ್ನಾತಕೋತ್ತರ ಪದವಿ ಪಡೆದಿರುವ ಭಾರತೀಯರು 151 ವರ್ಷ ಕಾಯಬೇಕಾಗುತ್ತದೆ ಎಂದು ಅಮೆರಿಕದ ಚಿಂತಕರ ಚಾವಡಿಯೊಂದು ಹೇಳಿದೆ. 2017ರಲ್ಲಿ ಅಮೆರಿಕವು ಭಾರತೀಯರಿಗೆ ನೀಡಿರುವ ಗ್ರೀನ್‌ಕಾರ್ಡ್ ಮತ್ತು ಗ್ರೀನ್‌ಕಾರ್ಡ್‌ಗಾಗಿ 2018ರಲ್ಲಿ ಅರ್ಜಿ ಸಲ್ಲಿಸಿರುವ ಭಾರತೀಯರ ಸಂಖ್ಯೆಯನ್ನು ಲೆಕ್ಕಹಾಕಿ ಕ್ಯಾಟೊ ಇನ್‌ಸ್ಟಿಟ್ಯೂಟ್ ಈ ಮಾಹಿತಿ ನೀಡಿದೆ.

ಮೂರು ವರ್ಗಗಳು...

ಶಿಕ್ಷಣ ಮತ್ತು ಪ್ರತಿಭೆಯನ್ನು ಆಧರಿಸಿ ವಲಸಿಗರನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಅತ್ಯುನ್ನತ ಶಿಕ್ಷಣ ಮತ್ತು ಪರಿಣತರದ್ದು ಮೊದಲನೇ ವರ್ಗ (ಎಕ್ಸಟ್ರಾಆರ್ಡಿನರಿ ಎಬಿಲಿಟಿ:ಇಬಿ–1), ಸ್ನಾತಕೋತ್ತರ ಪದವವೀಧರರದ್ದು ಎರಡನೇ ವರ್ಗ (ಅಡ್ವಾನ್ಸ್ಡ್ ಡಿಗ್ರಿ: ಇಬಿ–2) ಮತ್ತು ಸಾಮಾನ್ಯ ಪದವೀಧರರದ್ದು ಮೂರನೇ ವರ್ಗ (ಬ್ಯಾಚುಲರ್ಸ್ ಡಿಗ್ರಿ: ಇಬಿ–3). ಮೂರೂ ವರ್ಗಕ್ಕೂ ಪ್ರತಿ ವರ್ಷ ನಿಗದಿತ ಸಂಖ್ಯೆಯ ಗ್ರೀನ್‌ ಕಾರ್ಡ್‌ಗಳನ್ನಷ್ಟೇ ನೀಡಲಾಗುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬರುವುದರಿಂದ, ಹಲವು ವರ್ಷಗಳಿಂದ ಅರ್ಜಿಗಳು ಬಾಕಿ ಉಳಿದಿವೆ. ಬಾಕಿ ಉಳಿದಿರುವ ಅರ್ಜಿಗಳ ಸಂಖ್ಯೆಯ ಲೆಕ್ಕಾಚಾರದಲ್ಲಿ ಮೂರೂ ವರ್ಗದ ಅರ್ಜಿದಾರರು ಕ್ರಮವಾಗಿ 6, 151 ಮತ್ತು 17 ವರ್ಷ ಕಾಯಬೇಕಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.