ADVERTISEMENT

ಘೋನಿಮ್‌ಗೆ ಕೆನಡಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST

 ಬಾಸ್ಟನ್ (ಪಿಟಿಐ):  ಜೆಎಫ್‌ಕೆ ಪ್ರತಿಷ್ಠಾನ ನೀಡುವ ‘ಜಾನ್ ಎಫ್ ಕೆನಡಿ’ ಪ್ರಶಸ್ತಿಗೆ  ಗೂಗಲ್ ಕಾರ್ಯನಿರ್ವಾಹಕ ಅಧಿಕಾರಿ ವಾಯಿಲ್ ಘೋನಿಮ್ ಅವರು ಆಯ್ಕೆಯಾಗಿದ್ದಾರೆಈಜಿಪ್ಟ್‌ನಲ್ಲಿ  ಸರ್ವಾಧಿಕಾರಿ ಮುಬಾರಕ್ ವಿರುದ್ಧ ಅಹಿಂಸಾತ್ಮಕ ಕ್ರಾಂತಿಗೆ ಪ್ರೇರಣೆ ನೀಡಿದ ವಾಯಿಲ್  ಆ ಮೂಲಕ  ಮಧ್ಯಪ್ರಾಚ್ಯದಲ್ಲಿ ಪ್ರಜಾಪ್ರಭುತ್ವ ಕ್ಕಾಗಿ ಹೋರಾಟ  ಹಬ್ಬಲು ಕಾರಣರಾದ ಅವರಿಗೆ ಪ್ರಸಕ್ತ ಸಾಲಿನ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಜಾನ್ ಕೆನಡಿ  ಅಧ್ಯಕ್ಷೀಯ ಗ್ರಂಥಾಲಯದಲ್ಲಿ ಮೇ 23ರಂದು ನಡೆಯಲಿದ್ದು ಜಾನ್ ಎಫ್ ಕೆನಡಿ  ಪುತ್ರಿ  ಕಾರ್ಲೋನಿ ಕೆನಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT