ADVERTISEMENT

ಚಂದ್ರ ವಾತಾವರಣ ಅಧ್ಯಯನಕ್ಕೆ ನೌಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಹ್ಯೂಸ್ಟನ್ (ಪಿಟಿಐ): ಚಂದ್ರನ ವಾತಾವರಣವನ್ನು ಕೂಲಂಕಷವಾಗಿ ಅಧ್ಯಯನ ನಡೆಸುವ ಉದ್ದೇಶದಿಂದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ `ನಾಸಾ'ವು ಮಾನವರಹಿತ ಗಗನನೌಕೆಯೊಂದನ್ನು ವರ್ಜೀನಿಯಾದಿಂದ ಉಡಾವಣೆ ಮಾಡಿದೆ.


ನಾಸಾದ ಬಾಹ್ಯಾಕಾಶ ಅಧ್ಯಯನ ಯೋಜನೆಯ ಇತಿಹಾಸದಲ್ಲಿ ವರ್ಜೀನಿಯಾದಿಂದ ಗಗನನೌಕೆಯನ್ನು ಉಡಾವಣೆ ಮಾಡುತ್ತಿರುವುದು ಇದೇ ಮೊದಲು.

`ಲಾಡೀ' ಎಂಬ ಹೆಸರಿನ, ಸಣ್ಣ ಕಾರಿನಷ್ಟು ಗಾತ್ರದ ಗಗನನೌಕೆಯನ್ನು ಮಿನೊಟಾರ್ ರಾಕೆಟ್ ಮೂಲಕ ವಾಲ್ಲೊಪ್ಸ್ ದ್ವೀಪದಿಂದ ಶುಕ್ರವಾರ ಮಧ್ಯರಾತ್ರಿ ಚಂದ್ರನತ್ತ ಹಾರಿಬಿಡಲಾಯಿತು. ಈ ನೌಕೆಯು ಚಂದ್ರನ ಪರಿಸರ ಮತ್ತು ಅಲ್ಲಿರುವ ದೂಳಿನ ಅಧ್ಯಯನ ಮಾಡಲಿದೆ.

`ಲಾಡೀ' ನೌಕೆಯು ಒಂದು ತಿಂಗಳ ಬಳಿಕ ಚಂದ್ರನಲ್ಲಿಗೆ ತಲುಪಲಿದೆ. (ಸಾಮಾನ್ಯವಾಗಿ ಅಪೋಲೊ ಗಗನನೌಕೆಗಳು ಮೂರುದಿನಗಳಲ್ಲಿ ಚಂದ್ರನಲ್ಲಿಗೆ ತಲುಪುತ್ತವೆ.) ಅಕ್ಟೋಬರ್ 8ರಂದು ನೌಕೆ ಚಂದ್ರನನ್ನು ಸ್ಪರ್ಶಿಸುವ ನಿರೀಕ್ಷೆ ಇದೆ. ನೌಕೆಯು ಆರು ತಿಂಗಳ ಕಾಲ ಚಂದ್ರನ ವಾತಾವರಣ ಅಧ್ಯಯನ ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.