ವಾಷಿಂಗ್ಟನ್ (ಪಿಟಿಐ): ಇಳಿ ವಯಸ್ಸಿನಲ್ಲಿ ಜ್ಞಾಪಕಶಕ್ತಿ ಕೊರತೆಯಿಂದ ಉಂಟಾಗುವ ಡಿಮೆನ್ಷಿಯಾ ಮತ್ತು ಅಲ್‌ಜೈಮರ್ ರೋಗವನ್ನು ಚಾಕಲೇಟ್ ತಿನ್ನುವುದರಿಂದ ಗುಣಪಡಿಸಬಹುದೆಂದು ಸಂಶೋಧನೆ ತಿಳಿಸಿದೆ.
ರಾಸಾಯನಿಕ ಕೊಕೇನ್ ಅಂಶವಲ್ಲದ, ಅಸಲಿ ಕೊಕೇನ್‌ಯುಕ್ತ ಚಾಕಲೇಟ್‌ನ್ನು ಪ್ರತಿದಿನ ಆಹಾರ ಕ್ರಮದಲ್ಲಿ ಸೇವಿಸುವುದರಿಂದ ಹಿರಿಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಮರೆಗುಳಿತನ ಗುಣಮುಖವಾಗಿ ಸಂವೇದನಾ ಸಾಮರ್ಥ್ಯ ಹೆಚ್ಚುತ್ತದೆ.
ಇಟಲಿಯ ಎಲ್ ಆಕ್ವೆಲಾ ವಿ.ವಿ ವೃದ್ಧಾಪ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಜಿಯೊವಾಂಬಾತಿಸ್ತಾ, 70ಕ್ಕೂ ಮೇಲ್ಪಟ್ಟ ವಯಸ್ಸಿನ 90 ವೃದ್ಧರಲ್ಲಿ ಮೂರು ವಿಭಾಗಗಳಲ್ಲಿ ಈ ಸಂಶೋಧನೆಯನ್ನು ಕೈಗೊಂಡಿದ್ದಾರೆ ಎಂದು ಅಮೆರಿಕದ ಹೃದಯ ಸಂಶೋಧನಾ ಒಕ್ಕೂಟದ ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.