ADVERTISEMENT

ಚಿಲಿ ಬಿಷಪ್‌ಗಳ ರಾಜೀನಾಮೆ ಅಂಗೀಕರಿಸಿದ ಪೋಪ್

ಏಜೆನ್ಸೀಸ್
Published 11 ಜೂನ್ 2018, 19:30 IST
Last Updated 11 ಜೂನ್ 2018, 19:30 IST

ವ್ಯಾಟಿಕನ್‌ ಸಿಟಿ (ಎಎಫ್‌ಪಿ): ಲೈಂಗಿಕ ದೌರ್ಜನ್ಯ ವಿವಾದದಲ್ಲಿ ಸಿಲುಕಿದ್ದ ಚಿಲಿಯ ಮೂವರು ಬಿಷಪ್‌ಗಳ ರಾಜೀನಾಮೆಯನ್ನು ಪೋಪ್‌ ಫ್ರಾನ್ಸಿಸ್‌ ಅಂಗೀಕರಿಸಿದ್ದಾರೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಜಾನ್‌ ಬರ್ರೋಸ್‌ ಸೇರಿದಂತೆ ಮೂವರು ರಾಜೀನಾಮೆ ನೀಡಿದ್ದರು.

ಚಿಲಿಯ ಪಾದ್ರಿ ಫರ್ನಾಂಡೊ ಕರಾದಿಮ 1980 ಮತ್ತು 1990ರ ದಶಕದಲ್ಲಿ ಮಕ್ಕಳ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯವನ್ನು ಮುಚ್ಚಿಟ್ಟಿದ್ದ ಆರೋಪ ಈ ಬಿಷಪ್‌ಗಳ ಮೇಲಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.