ADVERTISEMENT

ಚೀನಾದ ಚಂದ್ರಯಾನ: ಯಶಸ್ವಿ ಉಡಾವಣೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 11:22 IST
Last Updated 2 ಡಿಸೆಂಬರ್ 2013, 11:22 IST

ಬೀಜಿಂಗ್(ಪಿಟಿಐ): ಚೀನಾ ತನ್ನ ಪ್ರಥಮ ಮಾನವ ರಹಿತ ಬಾಹ್ಯಾಕಾಶ ನೌಕೆಯನ್ನು ಚಂದ್ರನೆಡೆಗೆ ಕಳುಹಿಸಲು ಭಾನುವಾರ ಯಶಸ್ವಿ ಉಡಾವಣೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಹಯೋಗ ಹೊಂದಲು ಆಸಕ್ತಿ ತೋರಿದೆ.

ಚಾಂಗ್–3 ಆರ್ಬಿಟರ್ ಅನ್ನು ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಭಾನುವಾರ ರಾತ್ರಿ ಉಡಾಯಿಸಲಾಯಿತು.

ಭಾರತ ಮಂಗಳಯಾನಕ್ಕೆ ಮಾರ್ಸ್ ಆರ್ಬಿಟರ್ ಅನ್ನು ಉಡಾವಣೆ ಮಾಡಿದ ನಂತರ ಈ ಬಾಹ್ಯಾಕಾಶ ನೌಕೆಯನ್ನು ಚಂದ್ರನೆಡೆಗೆ ಕಳುಹಿಸಿದ್ದು ವಿಶೇಷ. ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳೊಂದಿಗೆ ಸಹಕಾರ ಹೊಂದರಲು ಆಸಕ್ತಿ ತೋರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.