ADVERTISEMENT

ಚುನಾವಣೆಯಲ್ಲಿ ಸ್ಪರ್ಧೆ: ವಯೋಮಿತಿ ಇಳಿಕೆಗೆ ಮುಂದಾದ ನೈಜಿರಿಯಾ

ಏಜೆನ್ಸೀಸ್
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಚುನಾವಣೆಯಲ್ಲಿ ಸ್ಪರ್ಧೆ: ವಯೋಮಿತಿ ಇಳಿಕೆಗೆ ಮುಂದಾದ ನೈಜಿರಿಯಾ
ಚುನಾವಣೆಯಲ್ಲಿ ಸ್ಪರ್ಧೆ: ವಯೋಮಿತಿ ಇಳಿಕೆಗೆ ಮುಂದಾದ ನೈಜಿರಿಯಾ   

ಅಬುಜಾ: ಮುಂದಿನ ವರ್ಷ ಚುನಾವಣೆಯಲ್ಲಿ ಯುವ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸುವ ನಿಟ್ಟಿನಲ್ಲಿ ವಯೋಮಿತಿಯನ್ನು ಕಡಿತಗೊಳಿಸುವ ಕಾನೂನಿಗೆ ಅನುಮೋದನೆ ನೀಡಲಾಗುವುದು ಎಂದು ನೈಜಿರಿಯಾ ಅಧ್ಯಕ್ಷ ಮುಹಮ್ಮದು ಬುಹಾರಿ ಹೇಳಿದ್ದಾರೆ.

ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ವಯೋಮಿತಿಯನ್ನು 40 ರಿಂದ 35ಕ್ಕೆ, ರಾಜ್ಯಪಾಲರು ಮತ್ತು ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ವಯಸ್ಸನ್ನು 35 ರಿಂದ 30 ಕ್ಕೆ ಇಳಿಸಲು ನೂತನ ಕಾಯ್ದೆ ಅವಕಾಶ ಕಲ್ಪಿಸಲಿದೆ’ ಎಂದರು.

ಸಂಸತ್ತಿನ ಎರಡೂ ಸದನಗಳು ಕಳೆದ ‌ವರ್ಷವೇ ಈ ಮಸೂದೆಗೆ ಒಪ್ಪಿಗೆ ಸೂಚಿಸಿದ್ದು, ಅಧ್ಯಕ್ಷರು ಅಂಕಿತ ಹಾಕಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.