ADVERTISEMENT

ಜಿ20 ಶೃಂಗ ಸಭೆ: ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಮೋದಿ

ಏಜೆನ್ಸೀಸ್
Published 7 ಜುಲೈ 2017, 6:25 IST
Last Updated 7 ಜುಲೈ 2017, 6:25 IST
ಜರ್ಮನಿಯ ಹ್ಯಾಂಬರ್ಗ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ
ಜರ್ಮನಿಯ ಹ್ಯಾಂಬರ್ಗ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ   

ಹ್ಯಾಂಬರ್ಗ್‌: ಇಲ್ಲಿ ಶುಕ್ರವಾರ ಆರಂಭವಾಗುವ ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೊದಿ ಅವರು ಜರ್ಮನಿಯ ಹ್ಯಾಂಬರ್ಗ್‌ಗೆ ಬಂದಿಳಿದಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರು ಜಿ20 ಶೃಂಗಸಭೆಗೆ ಭಾಗವಹಿಸಲು ಹ್ಯಾಂಬರ್ಗ್ ತಲುಪಿದ್ದಾರೆ. ಶೃಂಗಸಭೆಯ ಮೂಲಕ ಹಲವು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಒಪ್ಪಂದಗಳು ನಡೆಯಲಿವೆ ಎಂದು ಪ್ರಧಾನಿ ಕಚೇರಿ ಅಧಿಕಾರಿಗಳು ಟ್ವೀಟ್‌ ಮಾಡಿದ್ದಾರೆ.

ಮೂರು ದಿನಗಳ ಇಸ್ರೇಲ್‌ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿ ಅವರು, ಗುರುವಾರ ಇಸ್ರೇಲ್‌ನಿಂದ ಜರ್ಮನಿಯ ಹ್ಯಾಂಬರ್ಗ್‌ಗೆ ಪ್ರಯಾಣ ಬೆಳೆಸಿದ್ದರು.

ADVERTISEMENT

ಜಿ20 ಶೃಂಗ ಸಭೆ ಇಂದು ಆರಂಭವಾಗಲಿದ್ದು, ಈ ವೇಳೆ, ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮುಖಂಡರ ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.