ADVERTISEMENT

ಜೀವಕ್ಕೆ ಕುತ್ತು ತಂದ ವಿಡಿಯೋ ಗೇಮ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಲಂಡನ್ (ಐಎಎನ್‌ಎಸ್ ): ತೈವಾನ್‌ನ ಯುವಕನೊಬ್ಬನಿಗೆ ವಿಡಿಯೋಗೇಮ್ ಹುಚ್ಚು ಪ್ರಾಣಕ್ಕೆ ಎರವಾದ ಘಟನೆ ಟೈನಾನ್ ಸಿಟಿಯ ಕಂಪ್ಯೂಟರ್ ಸೈಬರ್ ಷಾಪ್‌ನಲ್ಲಿ ನಡೆದಿದೆ.

ಚಾಂಗ್ (18) ಸತತವಾಗಿ 40 ಘಂಟೆಗಳ ಕಾಲ ವಿಡಿಯೋ ಗೇಮ್‌ನಲ್ಲಿ ನಿರತನಾಗಿದ್ದ. ಈ ಸಂದರ್ಭದಲ್ಲಿ ಅನ್ನ, ನೀರು, ಆಹಾರ ಸ್ವೀಕರಿಸದೇ ತನ್ನ ಸಾವಿಗೆ ತಾನೆ ಕಾರಣನಾಗಿದ್ದಾನೆ.

ಜುಲೈ 15 ರಂದು ಚಾಂಗ್ ಕಂಪ್ಯೂಟರ್ ಸೈಬರ್ ಗೇಮ್ ಪ್ರಾರಂಭಿಸಿದ ನಂತರದ 40 ಗಂಟೆ ಆಡುತ್ತಲೇ ಪ್ರಜ್ಞೆ ತಪ್ಪಿದ. ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.ಸುದೀರ್ಘ ಆಟದಿಂದ ಹೃದಯಾಘಾತ ಆಗಿದೆ ಎಂದು ವೈದ್ಯರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.