ADVERTISEMENT

ಟುಟುಗೆ `ಟೆಂಪಲ್‌ಟನ್'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST
ಟುಟುಗೆ `ಟೆಂಪಲ್‌ಟನ್'
ಟುಟುಗೆ `ಟೆಂಪಲ್‌ಟನ್'   

ಲಂಡನ್ (ಪಿಟಿಐ): ವಿಶ್ವದಲ್ಲಿ `ಪ್ರೀತಿ ಮತ್ತು ಕ್ಷಮೆ'ಯ ಸಂದೇಶ ಹರಡಿದ ನೊಬೆಲ್ ಶಾಂತಿ ಪುರಸ್ಕೃತ ಡೆಸ್ಮಂಡ್ ಟುಟು ಅವರು ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ ಟೆಂಪಲ್‌ಟನ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

ಪೆನ್ಸಿಲ್ವೇನಿಯಾ ಮೂಲದ ಟೆಂಪಲ್‌ಟನ್ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿ ಸುಮಾರು ರೂ. ಒಂಬತ್ತು ಕೋಟಿ ಬಹುಮಾನ ಮೊತ್ತ ಹೊಂದಿದೆ.  ಕೇಪ್‌ಟೌನ್‌ನ ಮಾಜಿ ಆರ್ಚ್‌ಬಿಷಪ್‌ಹಾಗೂ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ಸೆಣಸಾಡಿದ 81ರ ಟುಟು ಅವರು ಮೇ 21ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.