ADVERTISEMENT

ಟೊರಂಟೊದಲ್ಲಿ ಪಾದಚಾರಿಗಳ ಮೇಲೆ ಚಲಿಸಿದ ವ್ಯಾನ್: 10 ಸಾವು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 2:05 IST
Last Updated 24 ಏಪ್ರಿಲ್ 2018, 2:05 IST
ಟೊರಂಟೊದಲ್ಲಿ ಪಾದಚಾರಿಗಳ ಮೇಲೆ ಚಲಿಸಿದ ವ್ಯಾನ್: 10 ಸಾವು
ಟೊರಂಟೊದಲ್ಲಿ ಪಾದಚಾರಿಗಳ ಮೇಲೆ ಚಲಿಸಿದ ವ್ಯಾನ್: 10 ಸಾವು   

ಟೊರಂಟೊ: ಪಾದಚಾರಿಗಳ ಮೇಲೆ ವ್ಯಾನ್ ಹರಿಸಿದ ಪರಿಣಾಮ 10 ಮಂದಿ ಮೃತಪಟ್ಟು 15ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಕೆನಡಾದ ಪ್ರಮುಖ ನಗರ ಟೊರಂಟೊದಲ್ಲಿ ನಡೆದಿದೆ.

ಏಕಾಏಕಿ ಪಾದಚಾರಿ ಮಾರ್ಗದ ಮೇಲೆ ರೈಡರ್ ಬಾಡಿಗೆ ವ್ಯಾನ್‌ ನುಗ್ಗಿಸಿದ ಚಾಲಕ ಜನರ ಮೇಲೆ ಹರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಸೋಮವಾರ ತಡರಾತ್ರಿ ಘಟನೆ ಸಂಭವಿಸಿದೆ.

ಆರೋಪಿ ಚಾಲಕ ಅಲೆಕ್ ಮಿನಾಸಿಯಾನ್‌ ಎಂಬಾತನನ್ನು ಬಂಧಿಸಲಾಗಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದೊಂದು ಉದ್ದೇಶಪೂರ್ವಕ ಕೃತ್ಯ ಎಂಬುದು ದೃಡಪಟ್ಟಿದೆ. ಆದರೆ, ಘಟನೆ ಹಿಂದೆ ಭಯೋತ್ಪಾದಕರ ಕೈವಾಡ ಇರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ನಗರ ಸುರಕ್ಷಿತವಾಗಿದೆ ಎಂದು ಮುಖ್ಯಸ್ಥ ಮಾರ್ಕ್‌ ಸಾಂಡರ್ಸ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.