ADVERTISEMENT

ಟ್ಯುನಿಶಿಯ ಘನ್ನೌಷಿ ಪ್ರಧಾನಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 18:30 IST
Last Updated 27 ಫೆಬ್ರುವರಿ 2011, 18:30 IST
ಟ್ಯುನಿಶಿಯ ಘನ್ನೌಷಿ ಪ್ರಧಾನಿ ರಾಜೀನಾಮೆ
ಟ್ಯುನಿಶಿಯ ಘನ್ನೌಷಿ ಪ್ರಧಾನಿ ರಾಜೀನಾಮೆ   

ಟ್ಯೂನಿಸ್(ಐಎಎನ್‌ಎಸ್): ಟ್ಯುನಿಶಿಯ ಪ್ರಧಾನಿ ಮೊಹಮ್ಮದ್ ಘನ್ನೌಷಿ ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ತಮ್ಮ ರಾಜೀನಾಮೆಯನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಘನ್ನೌಷಿ, ‘ನಾನು ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಮೊದಲೇ ನಿರ್ಧರಿಸಿದ್ದೆ. ಬಹಳವಾಗಿ ಯೋಚಿಸಿಯೇ ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಕುಟುಂಬದ ಎಲ್ಲ ಸದಸ್ಯರೂ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.

‘ನಾನು ನನ್ನ ಜವಾಬ್ದಾರಿಯಿಂದ ಓಡಿ ಹೋಗುವುದಿಲ್ಲ. ಹೊಸ ಪ್ರಧಾನಿಗಾಗಿ ಈ ಸ್ಥಾನ ತೆರವು ಮಾಡಿದ್ದೇನೆ. ನನ್ನ ಈ ನಿರ್ಧಾರ ಟ್ಯುನಿಶಿಯವನ್ನು ರಕ್ಷಿಸುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

ಘರ್ಷಣೆ: ಏತನ್ಮಧ್ಯೆ ಸರ್ಕಾರದ ಕೆಲ ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿರುವ ಪ್ರತಿಭಟನಾಕಾರರು ಮತ್ತು ರಕ್ಷಣಾ ಪಡೆಗಳ ನಡುವೆ ಶನಿವಾರ ಘರ್ಷಣೆ ಸಂಭವಿಸಿದೆ.

ರಾಜಧಾನಿ ಹಬೀಬ್ ಬೌರ್ಗುಯಿಬಾ ಅವೆನ್ಯೂನಲ್ಲಿ ಪ್ರತಿಭಟನಾ ನಿರತ ಯುವಕರು ಗೃಹ ಇಲಾಖೆ ಕಚೇರಿ ಬಳಿ ಮೆರವಣಿಗೆಯಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭ ರಕ್ಷಣಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿದ್ದು ಮೂವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.