ADVERTISEMENT

ತಮಿಳು ರೇಡಿಯೊಗೆ 50ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

>ಬೀಜಿಂಗ್ (ಪಿಟಿಐ): ಇಲ್ಲಿನ ಚೀನಾ ರೇಡಿಯೊ ಇಂಟರ್‌ನ್ಯಾಷನಲ್‌ನ (ಸಿಆರ್‌ಐ) ತಮಿಳು ಸೇವೆ ಶನಿವಾರ ಸುವರ್ಣ ಸಂಭ್ರಮ ಆಚರಿಸಿತು. ಭಾರತ ಮತ್ತು ಶ್ರೀಲಂಕಾ ಸೇರಿದಂತೆ ಸತತವಾಗಿ 50 ವರ್ಷಗಳ ಕಾಲ ದೀರ್ಘವಾಗಿ ತಮಿಳು ರೇಡಿಯೊ ಸೇವೆ ಒದಗಿಸಿದ ಕೀರ್ತಿಗೆ ಚೀನಾದ ಸಿಆರ್‌ಐ ಪಾತ್ರವಾಗಿದೆ.

`ರೇಡಿಯೊ ಪಿಕಿಂಗ್' ಎಂದೇ ಸಿಆರ್‌ಐ ಈ ಹಿಂದೆ ಪ್ರಸಿದ್ಧಿಯಾಗಿತ್ತು. ಸಿಆರ್‌ಐ ಹಿಂದಿ, ಬಂಗಾಲಿ, ಉರ್ದು, ತಮಿಳು, ಇಂಗ್ಲಿಷ್ ಸೇರಿದಂತೆ ಒಟ್ಟು 56 ಭಾಷೆಗಳ ಕಾರ್ಯಕ್ರಮವನ್ನು ಪ್ರತಿದಿನ ಬಿತ್ತರಿಸುತ್ತಿದೆ.

1963ರ ಆಗಸ್ಟ್ 1ರಂದು ತಮಿಳು ಭಾಷಾ ಸೇವಾ ಕೇಂದ್ರ ಆರಂಭಿಸಿದ ಸಿಆರ್‌ಐ ಇಂದು ಸಮೂಹ ಸಂವಹನದ ಮಾಧ್ಯಮದ ಮೂಲಕ ತನ್ನ ಸೇವೆಯನ್ನು ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.