ADVERTISEMENT

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರ ಸಂಘಟನೆ ನಾಯಕ ಮೌಲಾನಾ ಫಾಜ್ಲುಲ್ಲಾ ಬಗ್ಗೆ ಮಾಹಿತಿ ನೀಡಿದವರಿಗೆ ₹32.59ಕೋಟಿ ಬಹುಮಾನ

ಏಜೆನ್ಸೀಸ್
Published 9 ಮಾರ್ಚ್ 2018, 13:53 IST
Last Updated 9 ಮಾರ್ಚ್ 2018, 13:53 IST
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರ ಸಂಘಟನೆ ನಾಯಕ ಮೌಲಾನಾ ಫಾಜ್ಲುಲ್ಲಾ ಬಗ್ಗೆ ಮಾಹಿತಿ ನೀಡಿದವರಿಗೆ ₹32.59ಕೋಟಿ ಬಹುಮಾನ
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರ ಸಂಘಟನೆ ನಾಯಕ ಮೌಲಾನಾ ಫಾಜ್ಲುಲ್ಲಾ ಬಗ್ಗೆ ಮಾಹಿತಿ ನೀಡಿದವರಿಗೆ ₹32.59ಕೋಟಿ ಬಹುಮಾನ   

ವಾಷಿಂಗ್ಟನ್: ಅಫ್ಗಾನಿಸ್ತಾನ ಮೂಲದ, ಪಾಕಿಸ್ತಾನದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಉಗ್ರ ಸಂಘಟನೆ ಮುಖಂಡ ಮೌಲಾನಾ ಫಾಜ್ಲುಲ್ಲಾ ಬಗ್ಗೆ ಮಾಹಿತಿ ನೀಡಿದವರಿಗೆ  ₹32. 59 ಕೋಟಿ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.

ಅಲ್ಲದೇ ಜಮತ್–ಉಲ್–ಅಹ್ರರ್ (ಜೆಯುಎ) ಸಂಘಟನೆ ನಾಯಕ ಅಬ್ದುಲ್ ವಾಲಿ ಹಾಗೂ ಲಷ್ಕರ್–ಎ–ಇಸ್ಲಾಮ್ ಸಂಘಟನೆ ಮುಖಂಡ ಮಂಗಲ್ ಬಾಗ್ ಬಗ್ಗೆ ಮಾಹಿತಿ ನೀಡಿದ್ದಲ್ಲಿ 19.55 ಕೋಟಿ ಬಹುಮಾನ ಕೊಡುವುದಾಗಿ ಹೇಳಿದೆ.

ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾಧಿಕಾರಿಗಳು, ರಾಜ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ಕೈಗೊಂಡಿದ್ದ ವೇಳೆ ಅಮೆರಿಕ ಈ ಘೋಷಣೆ ಹೊರಡಿಸಿದೆ.

ADVERTISEMENT

ಟಿಟಿಪಿ ಸಂಘಟನೆಯು ಅಫ್ಗಾನಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಕಂಡ ಬಂದ ಒಂದು ಉಗ್ರ ಸಂಘಟನೆ. ಇದು ಅಲ್‌–ಕೈದಾ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.