ADVERTISEMENT

ಥಾಯ್ಲೆಂಡ್: ತುರ್ತು ಪರಿಸ್ಥಿತಿ ರದ್ದು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಬ್ಯಾಂಕಾಕ್ (ಪಿಟಿಐ): ರಾಜಕೀಯ ಹಿಂಸಾಚಾರ­ದಿಂದಾಗಿ ರಾಜಧಾನಿ ಬ್ಯಾಂಕಾಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ತಿಂಗಳಿಂದ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಪ್ರಧಾನಿ ಯಿಂಗ್ಲುಕ್ ಶಿನವಾತ್ರ ಮಂಗಳವಾರ ರದ್ದುಪಡಿಸಿದ್ದಾರೆ.

ಇದರಿಂದಾಗಿ,  ಪ್ರತಿಭಟನೆ ಹತ್ತಿಕ್ಕಲು ಹಂಗಾಮಿ ಸರ್ಕಾರ ರಚಿಸಿದ್ದ ‘ಶಾಂತಿ ಮತ್ತು ಆದೇಶ ನಿರ್ವಹಣಾ ಕೇಂದ್ರ’ದ ( ಸಿಎಂಪಿಒ) ಬದಲಿಗೆ, ‘ಆಂತರಿಕ ರಕ್ಷಣಾ ಕಾಯ್ದೆ’ಯನ್ನು  (ಐಎಸ್‌ಎ) ಜಾರಿಗೆ ತರಲಾಗಿದೆ.

ಸರ್ಕಾರದ ವಿವಾದಾತ್ಮಕ ಮಸೂದೆ ವಿರುದ್ಧ ರಾಜಧಾನಿಯಲ್ಲಿ ಭುಗಿಲೆದ್ದಿದ್ದ ಸರ್ಕಾರಿ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಲು ಯಿಂಗ್ಲುಕ್ ಅವರು ಜನವರಿ 22ರಂದು 60 ದಿನಗಳ ತುರ್ತು ಪರಿಸ್ಥಿತಿ ಹೇರಿದ್ದರು. 2013ರ ನವೆಂಬರ್‌ನಲ್ಲಿ ಥಾಯ್ಲೆಂಡ್‌ನಲ್ಲಿ ಕಾಣಿಸಿಕೊಂಡಿದ್ದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ 23 ಮಂದಿ ಜೀವ ತೆತ್ತಿದ್ದರಲ್ಲದೆ, ಸುಮಾರು 700 ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.