ADVERTISEMENT

ಥಾಯ್ಲೆಂಡ್ ಪ್ರಧಾನಿ ಶಿನವಾತ್ರ ಗಣರಾಜ್ಯೋತ್ಸವದ ಅತಿಥಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಬ್ಯಾಂಕಾಕ್ (ಪಿಟಿಐ): ಈ ಬಾರಿ ಗಣರಾಜ್ಯೋತ್ಸವದ ಅತಿಥಿಯಾಗಿ ಥಾಯ್ಲೆಂಡ್‌ನ ಪ್ರಥಮ ಮಹಿಳಾ ಪ್ರಧಾನಿ ಯಿಂಗ್‌ಲಕ್ ಶಿನವಾತ್ರ ಆಗಮಿಸಲಿದ್ದಾರೆ.

ಥಾಯ್ಲೆಂಡ್ ಮಾಜಿ ಪ್ರಧಾನಿ ತಕ್ಸಿನ್ ಶಿನವಾತ್ರ ಅವರ ಕಿರಿಯ ಸಹೋದರಿ ಯಾಗಿರುವ ಯಿಂಗ್‌ಲಕ್ ಕಳೆದ ಜೂನ್‌ನಲ್ಲಿ ಪ್ರಧಾನಿಯಾಗಿ ಆಯ್ಕೆ ಯಾಗಿದ್ದರು. ಮೂರು ದಿನಗಳ ಅಧಿಕೃತ ಭೇಟಿಗಾಗಿ ಜ. 24ರಂದು ಅವರು ದೆಹಲಿಗೆ ಬರಲಿದ್ದಾರೆ ಎಂದು ಥಾಯ್ ವಾಣಿಜ್ಯ ಪ್ರತಿನಿಧಿ ನಳಿನಿ ಥಾವೀಸಿನ್ ತಿಳಿಸಿದ್ದಾರೆ.

ಇಂಧನ, ಪೆಟ್ರೊಲಿಯಂ ಹಾಗೂ ಆಹಾರ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ವಾಣಿಜ್ಯ ವ್ಯವಹಾರ ಹಾಗೂ ಬಂಡವಾಳ ಹೂಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಯಿಂಗ್‌ಲಕ್ ಭಾರತ ಸರ್ಕಾರ ದೊಂದಿಗೆ ಭೇಟಿಯ ಸಂದರ್ಭದಲ್ಲಿ ಮಾತುಕತೆ ನಡೆಸಲಿದ್ದಾರೆ.

120 ಕೋಟಿ ಜನಸಂಖ್ಯೆಯ ಭಾರತ, ಥಾಯ್ಲೆಂಡ್‌ಗೆ ದೊಡ್ಡ ಮಾರುಕಟ್ಟೆಯಾಗಿದ್ದು, ಆರ್ಥಿಕ ಕ್ಷೇತ್ರದಲ್ಲಿ ಅದನ್ನು ಮಹತ್ವದ ಪಾಲುದಾರ ಎಂದು ಪರಿಗಣಿಸುತ್ತದೆ ಎಂದು ನಳಿನಿ ಹೇಳಿದ್ದಾರೆ.

2015ರ ಹೊತ್ತಿಗೆ `ಆಸಿಯಾನ್~ ಆರ್ಥಿಕ ಕೂಟ ಚಾಲ್ತಿಗೆ ಬಂದಾಗ ಥಾಯ್ಲೆಂಡ್, ಭಾರತಕ್ಕೆ ಬಂಡವಾಳ ಹೂಡಿಕೆಗೆ ಅಪಾರ ಅವಕಾಶ ಒದಗಿಸುವ ದೇಶವಾಗಲಿದೆ.

ಅದಕ್ಕೆ ಪ್ರತಿಯಾಗಿ ಭಾರತ ಥಾಯ್ಲೆಂಡ್ ಉತ್ಪನ್ನಗಳಿಗೆ ಮಾರುಕಟ್ಟೆಯಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.