ADVERTISEMENT

ಥಾಯ್ಲೆಂಡ್: 3 ಬಾಂಬ್ ಸ್ಫೋಟ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST
ಥಾಯ್ಲೆಂಡ್: 3 ಬಾಂಬ್ ಸ್ಫೋಟ
ಥಾಯ್ಲೆಂಡ್: 3 ಬಾಂಬ್ ಸ್ಫೋಟ   

ಬ್ಯಾಂಕಾಕ್ (ಪಿಟಿಐ): ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಮಂಗಳವಾರ ಮೂರು ಬಾಂಬ್‌ಗಳು ಸ್ಫೋಟಿಸಿದ್ದು, ಇದಕ್ಕೆ ಇರಾನ್ ಮೂಲದ ವ್ಯಕ್ತಿ ಕಾರಣ ಎಂದು ಶಂಕಿಸಲಾಗಿದೆ.

ಸ್ಫೋಟದಿಂದ ಶಂಕಿತ ವ್ಯಕ್ತಿ ಸೈಯದ್ ಮೊರಾಬಿ ಎರಡು ಕಾಲುಗಳಿಗೂ ಹಾನಿಯಾಗಿದ್ದು, ಆತ ಕಾಲುಗಳನ್ನು ಕಳೆದುಕೊಂಡಿದ್ದಾನೆ. ಜೊತೆಗೆ ಇತರ ನಾಲ್ವರು ಗಾಯಗೊಂಡಿದ್ದಾರೆ.

ಬ್ಯಾಂಕಾಕ್‌ನ ಕೇಂದ್ರ ಭಾಗದ ಪ್ರದೇಶದಲ್ಲಿ ಮೊರಾಬಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ. ಆ ಮನೆಯಲ್ಲೇ ಒಂದು ಬಾಂಬ್ ಅನ್ನು ಆತ ಸ್ಫೋಟಿಸಿದ್ದಾನೆ ಎನ್ನಲಾಗಿದೆ. ನಂತರ, ಟ್ಯಾಕ್ಸಿಗೆ ತನ್ನನ್ನು ಹತ್ತಿಸಿಕೊಳ್ಳಲು ಚಾಲಕ ನಿರಾಕರಿಸಿದ ಎಂಬ ಕಾರಣಕ್ಕೆ ಮೊರಾಬಿ ಆ ಟ್ಯಾಕ್ಸಿ ಮೇಲೆ ಬಾಂಬ್ ಹಾಕಿದ್ದಾನೆ.

ವಿಧ್ವಂಸಕ ಕೃತ್ಯಕ್ಕೆ ಮುಂದಾದ ಮೊರಾಬಿಯನ್ನು ಸೆರೆ ಹಿಡಿಯಲು ಪೊಲೀಸರು ನುಗ್ಗಿದಾಗ ಮೂರನೇ ಬಾಂಬ್ ಅನ್ನು ಆತ ಎಸೆದ. ಅದು ಮರವೊಂದಕ್ಕೆ ಬಡಿದು ಪುನಃ ಆತನ ಮೇಲೆ ಬಿದ್ದಿತು.  ಅವನ ಎರಡು ಕಾಲುಗಳಿಗೂ ಹಾನಿ ಆಗಿ, ಆತ ಕಾಲು ಕಳೆದುಕೊಂಡ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ.

ನವದೆಹಲಿ ಮತ್ತು ಜಾರ್ಜಿಯಾದ ಟಿಬಿಲ್ಸಿಗಳಲ್ಲಿ ಇಸ್ರೇಲ್ ದೂತಾವಾಸದ ಸಿಬ್ಬಂದಿ ವರ್ಗದವರನ್ನು ಗುರಿಯಾಗಿಟ್ಟುಕೊಂಡು ಸೋಮವಾರ ನಡೆದ ದಾಳಿಯ ಬೆನ್ನಲ್ಲೇ ಈ  ಸ್ಫೋಟ ಕೂಡ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.