ADVERTISEMENT

ದೀಪಾವಳಿ ರಾತ್ರಿಯ ಭಾರತ ನಕ್ಷೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ವಾಷಿಂಗ್ಟನ್ (ಪಿಟಿಐ): ದೀಪಾವಳಿಯ ರಾತ್ರಿ ಅಂತರಿಕ್ಷದಿಂದ ಸೆರೆ ಹಿಡಿಯಲಾದ ಭಾರತದ ನಕ್ಷೆಯ ಕಪ್ಪು ಬಿಳುಪು ಛಾಯಾಚಿತ್ರವನ್ನು ನಾಸಾ ಗುರುವಾರ ಬಿಡುಗಡೆ ಮಾಡಿದೆ.

ಸುಓಮಿ ಎನ್‌ಪಿಪಿ ಉಪಗ್ರಹವು ವಿಸಿಬಲ್ ಇನ್‌ಫ್ರಾರೆಡ್ ಇಮೇಜಿಂಗ್ ರೇಡಿಯೊಮೀಟರ್ ಸೂಟ್ (ವಿಐಐಆರ್‌ಎಸ್) ನೆರವಿನಿಂದ ನ.12ರ ರಾತ್ರಿ ಸೆರೆ ಹಿಡಿದ ಚಿತ್ರ ಇದಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೀಪಾವಳಿ ರಾತ್ರಿಯ ಭಾರತದ ಭೂಪಟವು ನಕಲಿ ಎಂದೂ ಅದು ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.