ADVERTISEMENT

ದ. ಕೊರಿಯಾ: ಮೊದಲ ಅಧ್ಯಕ್ಷೆ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2013, 19:59 IST
Last Updated 25 ಫೆಬ್ರುವರಿ 2013, 19:59 IST
ದ. ಕೊರಿಯಾ: ಮೊದಲ ಅಧ್ಯಕ್ಷೆ ಪ್ರಮಾಣ
ದ. ಕೊರಿಯಾ: ಮೊದಲ ಅಧ್ಯಕ್ಷೆ ಪ್ರಮಾಣ   

ಸೋಲ್ (ಎಎಫ್‌ಪಿ/ಐಎಎನ್‌ಎಸ್): ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಾರ್ಕ್ ಗೆನ್ ಹ್ಯೆ  (61) ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ಉತ್ತರ ಕೊರಿಯಾದ ಪ್ರಚೋದನಕಾರಿ ಕಾರ್ಯಗಳನ್ನು ಸಹಿಸುವುದಿಲ್ಲ ಹಾಗೂ  ಪರಮಾಣು ಶಕ್ತಿ ಹೊಂದುವ ಆಕಾಂಕ್ಷೆಯನ್ನು ಉತ್ತರ ಕೊರಿಯಾ ತಕ್ಷಣವೇ ಕೈಬಿಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಇತ್ತೀಚೆಗೆ ಉತ್ತರ ಕೊರಿಯಾ ಕೈಗೊಂಡ ಪರಮಾಣು ಪರೀಕ್ಷೆ ಕೊರಿಯಾ ಜನತೆಯ ಭವಿಷ್ಯ ಮತ್ತು ಬದುಕಿಗೆ ಸವಾಲಾಗಿದೆ. ಇದರಿಂದ ಉತ್ತರ ಕೊರಿಯಾ ದೇಶವೇ ಬಲಿಯಾಗುವುದರಲ್ಲಿ ಸಂಶಯವಿಲ್ಲ ಎಂದೂ ಗೆನ್ ಅಭಿಪ್ರಾಯಪಟ್ಟರು.

ಗೆನ್ ಅವರ ತಂದೆ  ಪಾರ್ಕ್ ಚುಂಗ್ ಹೀ ಅವರು ಕಟ್ಟಾ ಕಮ್ಯುನಿಸ್ಟ್ ವಿರೋಧಿಯಾಗಿದ್ದು ಸರ್ವಾಧಿಕಾರಿ ಎನಿಸಿದ್ದರು. ಪಾರ್ಕ್ ಚುಂಗ್ ಹೀ ಅವರು 50 ವರ್ಷಗಳಿಗೂ ಹಿಂದೆ ಸೇನಾ ಕ್ಷಿಪ್ರಕ್ರಾಂತಿಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡು ಮುಂದಿನ 18 ವರ್ಷಗಳವರೆಗೆ ರಾಷ್ಟ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು.

ಭಾರತಕ್ಕೆ ಆಹ್ವಾನ: ನೂತನ ಅಧ್ಯಕ್ಷರನ್ನು ಅಭಿನಂದಿಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಭಾರತಕ್ಕೆ ಭೇಟಿ ನೀಡುವಂತೆ ಗೆನ್ ಅವರನ್ನು ಆಹ್ವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.