ADVERTISEMENT

ಧೂಮಕೇತು ಚಂದ್ರನಿಗಿಂತಲೂ ಪ್ರಕಾಶಮಾನ..!

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಗಗನ ಕುತೂಹಲಿಗಳಿಗೊಂದು ಸಂತಸದ ಸುದ್ದಿ.  ಚಂದ್ರನಿಗಿಂತಲೂ ಪ್ರಕಾಶಮಾನವಾಗಿರುವ ಧೂಮಕೇತುವೊಂದನ್ನು  ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

 ಭೂಮಿಯಿಂದ 9 ಕೋಟಿ ಕಿ.ಮೀ ದೂರದಲ್ಲಿ `2012ಎಸ್1~ (ಐಎಸ್‌ಒಎನ್) ಎಂಬ ಹೆಸರಿನ ಧೂಮಕೇತುವನ್ನು ರಷ್ಯಾದ ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ವಿಜ್ಞಾನಿಗಳ ತಂಡದಲ್ಲಿ ಭಾರತೀಯ ಮೂಲದ ವಿಜ್ಞಾನಿಯೊಬ್ಬರೂ ಇದ್ದಾರೆ.

ಪ್ರಸ್ತುತ, ಈ ಧೂಮಕೇತು ಶನಿ ಮತ್ತು ಗುರು ಗ್ರಹಗಳ ನಡುವೆ ಅಸ್ಪಷ್ಟವಾಗಿ ಹೊಳೆಯುತ್ತಿದೆ. ಆದರೆ ಸೂರ್ಯನ ಗುರುತ್ವಾಕರ್ಷಣೆ ಶಕ್ತಿಯು ಧೂಮಕೇತುವನ್ನು ಹತ್ತಿರಕ್ಕೆ ಸೆಳೆದಂತೆ ದೂಳು ಮತ್ತು ಹಿಮ ಸ್ಫೋಟಿಸಲು ಆರಂಭಿಸುತ್ತದೆ ಇದರಿಂದ ಇದರ  ಬಾಲ ಅತ್ಯಂತ ಪ್ರಕಾಶಮಾನವಾಗಿ ಗೋಚರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈಗ ಸೂರ್ಯನಿಂದ ಸಾಕಷ್ಟು ದೂರದಲ್ಲಿರುವ ಈ ಧೂಮಕೇತು ಈಗಾಗಲೇ ಪ್ರಕಾಶಮಾನವಾಗಿದೆ ಎಂದು ಭಾರತೀಯ ಮೂಲದ ವಿಜ್ಞಾನಿ ರಮೀಂದರ್ ಸಿಂಗ್ ಸಾಮ್ರಾ ಹೇಳಿದ್ದಾರೆ. ಮೂರು ಕಿ.ಮೀ ಅಗಲವಿರುವ ಈ ಧೂಮಕೇತು 2013ರ ಅಂತ್ಯ ಮತ್ತು 2014ರ ಆರಂಭದಲ್ಲಿ ಗೋಚರಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.