ಲಂಡನ್ (ಐಎಎನ್‌ಎಸ್): ಒಂದು ಲೋಟ ನೀರು ಸೇವನೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಉತ್ತಮ ಸಹಕಾರಿಯಾಗಬಲ್ಲದು ಎಂದು ಸಂಶೋಧಕರು ಹೇಳಿದ್ದಾರೆ.
ಕಾಫಿ, ಟೀ, ಕೋಲಾ ಹಾಗೂ ನೀರನ್ನು ಪರೀಕ್ಷಾ ಕೊಠಡಿಗೆ ಒಯ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಫಲಿತಾಂಶಗಳ ಕುರಿತು ಅಧ್ಯಯನ ನಡೆಸಿದಾಗ ಈ ವಿಷಯ ದೃಢಪಟ್ಟಿದೆ. ಪರೀಕ್ಷೆ ವೇಳೆ ನೀರು ಸೇವೆಸಿದ ಮಕ್ಕಳು ಉಳಿದ ವಿದ್ಯಾರ್ಥಿಗಳಿಗಿಂತ ಶೇ 10ರಷ್ಟು ಉತ್ತಮವಾಗಿ ಪರೀಕ್ಷೆ ಬರೆದಿದ್ದಾರೆ.
ನೀರು ಕುಡಿಯುವುದರಿಂದ ದೇಹದಲ್ಲಿ ದ್ರವ ಅಂಶ ಹೆಚ್ಚಾಗಿ ನರಗಳು ಸಡಿಲವಾಗಿ, ನಿರುದ್ವಿಗ್ನವಾಗಿರುತ್ತವೆ. ಅದೇ ಬಾಯಾರಿಕೆಯಾದಾಗ ಮನಸ್ಸು ವಿಚಲಿತವಾಗುವ ಸಾಧ್ಯತೆ ಹೆಚ್ಚು ಎಂದು ಬ್ರಿಟಿಷ್ ಸಂಶೋಧಕರು ವಿವರಿಸಿದ್ದಾರೆ.
ಆಗಾಗ ನೀರು ಸೇವಿಸುವುದರಿಂದ ಮಿದುಳಿನ ಕೋಶಗಳ ನಡುವೆ ಮಾಹಿತಿ ಹರಿವು ಸುಲಭವಾಗುತ್ತದೆ ಎಂದು ಕೆಲವು ತಜ್ಞರು ಪ್ರತಿಪಾದಿಸುತ್ತಾರಾದರೂ, ಪರೀಕ್ಷೆ ಬರವಣಿಗೆಯ ಮೇಲೆ ನೀರು ಸೇವನೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.