ADVERTISEMENT

ನೈಜೀರಿಯಾ: ಎರಡನೇ ಅವಧಿಗೆ ಅಧ್ಯಕ್ಷರಾಗಿ ಬುಹಾರಿ

ಏಜೆನ್ಸೀಸ್
Published 29 ಮೇ 2019, 19:16 IST
Last Updated 29 ಮೇ 2019, 19:16 IST
ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ಸಂದರ್ಭದಲ್ಲಿ ನೆರೆದಿದ್ದ ಜನರತ್ತ ಕೈಬೀಸಿದ ಬುಹಾರಿ 
ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ಸಂದರ್ಭದಲ್ಲಿ ನೆರೆದಿದ್ದ ಜನರತ್ತ ಕೈಬೀಸಿದ ಬುಹಾರಿ    

ಅಬುಜಾ: ಮುಹಮ್ಮದ್ ಬುಹಾರಿ ನೈಜೀರಿಯಾ ಅಧ್ಯಕ್ಷರಾಗಿ 2ನೇ ಅವಧಿಯ ಅಧಿಕಾರವನ್ನು ಬುಧವಾರ ರಾಜಧಾನಿ ಅಬುಜಾದಲ್ಲಿಸ್ವೀಕರಿಸಿದರು.

ಆಫ್ರಿಕಾದ ಪ್ರಮುಖ ಆರ್ಥಿಕ ಪ್ರದೇಶವಾದ ನೈಜೀರಿಯಾದಿಂದ ಭ್ರಷ್ಟಾಚಾರವನ್ನು ಕಿತ್ತೊಗೆಯುವುದು ಮತ್ತು ದುರ್ಬಲಗೊಂಡಿರುವ ಭದ್ರತೆಯನ್ನು ಸದೃಢಗೊಳಿಸುವ ಪ್ರತಿಜ್ಞೆಯನ್ನು ಅವರು ಸ್ವೀಕರಿಸಿದರು.

‘ಸಂವಿಧಾನದ ರಕ್ಷಣೆಗೆ ನಾನು ಬದ್ಧ. ನೈಜೀರಿಯಾ ಜನತೆಗೆ ನಾನು ನಿಷ್ಠಾವಂತನಾಗಿರುವ ಪ್ರತಿಜ್ಞೆ ಮಾಡುತ್ತೇನೆ’ ಎಂದರು. 2015ರಿಂದ ಅಧಿಕಾರದಲ್ಲಿರುವ 76 ವರ್ಷದ ಬುಹಾರಿ ಫೆಬ್ರುವರಿಯಲ್ಲಿ ಶೇ 56 ಮತದೊಂದಿಗೆ ಮರು ಆಯ್ಕೆಗೊಂಡಿದ್ದರು. ಇವರ ಆಡಳಿತಾವಧಿ ನಾಲ್ಕು ವರ್ಷ ಇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.