ವೆಲಿಂಗ್ಟನ್ (ಎಪಿಎಫ್): ನ್ಯೂಜಿಲೆಂಡ್‌ನ ರಾಜಧಾನಿ ವೆಲಿಂಗ್ಟನ್ ದಕ್ಷಿಣ ಭಾಗ ಒಳಗೊಂಡಂತೆ 57 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಭಾನುವಾರ ಭಾರೀ ಪ್ರಮಾಣದ ಭೂಕಂಪನ ಉಂಟಾಗಿದ್ದು, ಯಾವುದೇ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿ ಉಂಟಾಗಿರುವ ಬಗ್ಗೆ ವರದಿ ಲಭ್ಯವಾಗಿಲ್ಲ. ಪಾಕ್‌ನಲ್ಲೂ ಭೂಕಂಪ ಸಂಭವಿಸಿದೆ.
ಅಂತರರಾಷ್ಟ್ರೀಯ ಕಾಲಮಾನದ ಪ್ರಕಾರ ಭಾನುವಾರ ಬೆ. 5.09ರ ಕ್ಕೆ ಭೂಮಿ ಕಂಪಿಸಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.9ರಷ್ಟಿತ್ತು. ಅವಘಡದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಕ್ಷಿಸುವಂತೆ ಕೋರಿ ಅನೇಕ ದೂರವಾಣಿ ಕರೆಗಳು ಅಗ್ನಿ ಶಾಮಕ ದಳದ ಸಹಾಯವಾಣಿಗೆ ಬಂದಿವೆ. ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.