ADVERTISEMENT

ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ನ್ಯೂಯಾರ್ಕ್ (ಪಿಟಿಐ): ಚಂಡಮಾರುತ ಲೀ ಪರಿಣಾಮವಾಗಿ ನ್ಯೂಯಾರ್ಕ್ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯ ನಿರ್ವಹಣೆಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ನೆರೆ ಹಾವಳಿಗೆ ಒಳಗಾದ ಪ್ರದೇಶಗಳಿಗೆ ತುರ್ತು ಸಹಾಯ ಒದಗಿಸಲು, ಆಹಾರ, ಆರೋಗ್ಯ ಸುರಕ್ಷೆ, ಜನರ ಸ್ಥಳಾಂತರ, ಆಸ್ತಿ ಸಂರಕ್ಷಣೆ ಮುಂತಾದ ಕ್ರಮಗಳನ್ನು ರಾಜ್ಯ ಗೃಹ ಸುರಕ್ಷಾ ಇಲಾಖೆಯು ಕೈಗೊಳ್ಳಲಿದೆ.

ಈಗಾಗಲೇ ಮಳೆಗೆ 9 ಜನರು ಬಲಿಯಾಗಿದ್ದು, 1 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲು ಅದೇಶಿಸಲಾಗಿದೆ. ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆಯು ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೆನಿಯಾ, ಮೆರಿಲ್ಯಾಂಡ್ ಹಾಗೂ ವರ್ಜಿನಿಯಾ ಪ್ರಾಂತ್ಯಗಳಿಗೆ ನೆರೆ ಎಚ್ಚರಿಕೆ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.