ADVERTISEMENT

ನ್ಯೂಯಾರ್ಕ್‌ನಲ್ಲಿ ಸುನಂದೊ ಸೇನ್ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2013, 19:59 IST
Last Updated 1 ಜನವರಿ 2013, 19:59 IST
ಸುನಂದೊ ಸೇನ್
ಸುನಂದೊ ಸೇನ್   

ನ್ಯೂಯಾರ್ಕ್ (ಪಿಟಿಐ): ಬಿಳಿ ಮಹಿಳೆಯೊಬ್ಬಳ ಕೋಮು ದ್ವೇಷಕ್ಕೆ ಗುರಿಯಾಗಿ ಚಲಿಸುವ ರೈಲಿಗೆ ಸಿಲುಕಿ ಮೃತಪಟ್ಟಿದ್ದ ಭಾರತೀಯ ಮೂಲದ ಸುನಂದೊ ಸೇನ್ ಅವರ ಅಂತ್ಯಕ್ರಿಯೆಯನ್ನು ನ್ಯೂಯಾರ್ಕ್‌ನಲ್ಲಿ ನೆರವೇರಿಸಲಾಯಿತು.

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಸೇನ್ ಸ್ನೇಹಿತರು, ಉದ್ದಿಮೆ ಪಾಲುದಾರರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಎರಿಕ್ ಮೆಂಡ್ೆ ಎಂಬ ಬಿಳಿಯ ಮಹಿಳೆ ಸುನಂದೊ ಅವರನ್ನು ಮುಸ್ಲಿಂ ಎಂದು ತಿಳಿದು ಸಬ್‌ವೇ ರೈಲು ಹಳಿಗಳ ಮೇಲೆ ತಳ್ಳಿದ್ದರು. ಚಲಿಸುವ ರೈಲಿಗೆ ಸಿಲುಕಿ ಸುನಂದೊ ಸಾವನ್ನಪ್ಪಿದ್ದರು.

ಹತ್ಯೆ ಮಾಡಿದ ಎರಿಕ್‌ಳನ್ನು ಮನೋವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷೆ ಸಂದರ್ಭದಲ್ಲಿ `ಸುನಂದೊ ಅವರನ್ನು ಮುಸ್ಲಿಂ ವ್ಯಕ್ತಿಯೆಂದು ತಿಳಿದು ಹತ್ಯೆ ಮಾಡಿದ್ದಾಗಿ' ಹೇಳಿದ್ದಾಳೆ. ಇದರ ಅನ್ವಯ ಆಕೆ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಆರೋಪ ಸಾಬೀತಾದರೆ 25 ವರ್ಷ ಅಥವಾ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಹತ್ಯೆಯಾದ ಸುನಂದೊ ಸೇನ್ ಅವಿವಾಹಿತ. ಇವರಿಗೆ ಭಾರತದಲ್ಲಿ ಯಾವ ಸಂಬಂಧಿಕರಿಲ್ಲ.
ಅವರು 16 ವರ್ಷದಿಂದ ನ್ಯೂಯಾರ್ಕ್‌ನಲ್ಲಿ ಚಿಕ್ಕ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತರೊಂದಿಗೆ ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.