ADVERTISEMENT

ಪರಮಾಣು ಇಂಧನ ವಿರೋಧಿಸಿ ರ್‍್ಯಾಲಿ

ಜಪಾನ್‌ನ ವಿವಿಧೆಡೆ ನಾಗರಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST
ಫುಕುಶಿಮಾ ಪರಮಾಣು ದುರಂತ ಸಂಭವಿಸಿ ಮೂರು ವರ್ಷ ತುಂಬಿದ ಹಿನ್ನೆಲೆ­ಯಲ್ಲಿ ಟೋಕಿಯೊದಲ್ಲಿ ನಾಗರಿಕರು ಪರಮಾಣು ವಿಕಿರಣದಿಂದ ರಕ್ಷಣೆ ಪಡೆ­ಯುವ ಮುಖವಾಡ ಧರಿಸಿ  ಜಪಾನ್‌ ಪ್ರಧಾನಿ ನಿವಾಸದ ಎದುರು ಪ್ರತಿಭಟನಾ ರ್‍್ಯಾಲಿ ನಡೆಸಿದರು 	  –ಎಪಿಎಫ್‌ ಚಿತ್ರ
ಫುಕುಶಿಮಾ ಪರಮಾಣು ದುರಂತ ಸಂಭವಿಸಿ ಮೂರು ವರ್ಷ ತುಂಬಿದ ಹಿನ್ನೆಲೆ­ಯಲ್ಲಿ ಟೋಕಿಯೊದಲ್ಲಿ ನಾಗರಿಕರು ಪರಮಾಣು ವಿಕಿರಣದಿಂದ ರಕ್ಷಣೆ ಪಡೆ­ಯುವ ಮುಖವಾಡ ಧರಿಸಿ ಜಪಾನ್‌ ಪ್ರಧಾನಿ ನಿವಾಸದ ಎದುರು ಪ್ರತಿಭಟನಾ ರ್‍್ಯಾಲಿ ನಡೆಸಿದರು –ಎಪಿಎಫ್‌ ಚಿತ್ರ   

ಟೋಕಿಯೊ (ಎಪಿ): ಫುಕುಶಿಮಾ ಪರಮಾಣು ದುರಂತದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಭಾನುವಾರ  ಪರಮಾಣು ಇಂಧನದ ಬಳಕೆ ನಿಲ್ಲಿಸು­ವಂತೆ ಆಗ್ರಹಿಸಿ ಜಪಾನ್‌ನ ವಿವಿಧ ನಗರಗಳಲ್ಲಿ ಸಾವಿರಾರು ಜನ ಪ್ರತಿಭಟನೆ ನಡೆಸಿದರು.

ಫುಕುಶಿಮಾ ಪರಮಾಣು ಸ್ಥಾವರ­ದಲ್ಲಿ ಸ್ಥಗಿತಗೊಂಡಿರುವ 48 ಘಟಕಗಳ ಮರುಚಾಲನೆಗೆ ಮುಂದಾಗಿ­ರುವ ಜಪಾನ್‌ ಸರ್ಕಾರದ ಕ್ರಮವನ್ನು  ಖಂಡಿಸಿ ಈ  ಪ್ರತಿಭಟನೆ ನಡೆಯಿತು. ಅಣು ಸ್ಥಾವರಕ್ಕೆ ಚಾಲನೆ ನೀಡು­ವುದನ್ನು  ವಿರೋಧಿಸಿ ದೇಶದ ವಿವಿಧೆಡೆ­ಯಿಂದ ಕುಟುಂಬ ಸಮೇತ­ರಾಗಿ ಬಂದಿದ್ದ ಸಾವಿರಾರು ಜನರು ಬೃಹತ್‌ ರ್‍್ಯಾಲಿಯಲ್ಲಿ ಪಾಲ್ಗೊಂ­ಡಿದ್ದರು. 

ಟೋಕಿಯೊ ಉದ್ಯಾನದಲ್ಲಿ ಸೇರಿದ್ದ ಪ್ರತಿಭಟನಾ­ಕಾರರು, ಡೋಲು ಬಾರಿಸುತ್ತ, ಪರಮಾಣು ಘಟಕ ಬೇಡ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿ­ದರು.   ಪರಮಾಣು ಘಟಕ­ಗಳ ಮರುಸ್ಥಾಪನೆಗೆ ಮುಂದಾಗ­ಬಾರದು ಎಂದು ಸರ್ಕಾರವವನ್ನು ಒತ್ತಾಯಿಸಿದ್ದಾರೆ.

ಆಸ್ಕರ್‌ ಪ್ರಶಸ್ತಿ ಪುರಸ್ಕೃತ ರಿಯೂಚಿ ಸಕಮೊಟೊ ಹಾಗೂ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಲೇಖಕ ಕೆಂಝಬುರೊ ಓಯಿ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 2011ರ ಮಾರ್ಚ್‌ 11ರಂದು ನಡೆದ ಈ ಘೋರ ಘಟನೆಯಿಂದಾದ ಅವಘಡವನ್ನು ಜಪಾನ್‌ ಜನತೆ ಇನ್ನೂ ಮರೆತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.