ADVERTISEMENT

ಪಾಕಿಸ್ತಾನಿ ಸರ್ಕಾರ ಎಲ್ಲ ಸಚಿವರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 9:20 IST
Last Updated 9 ಫೆಬ್ರುವರಿ 2011, 9:20 IST

ಇಸ್ಲಾಮಾಬಾದ್: ಪಾಕಿಸ್ತಾನದ ಕೇಂದ್ರ ಸರ್ಕಾರದ ಎಲ್ಲಾ ಮಂತ್ರಿಗಳೂ ಸಂಪುಟ ಪುನರ್‍ರಚನೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜೀನಾಮೆ ನೀಡಿದ್ದಾರೆಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಪಾಕಿಸ್ತಾನೀ ಸಂವಿಧಾನದ 18ನೇ ತಿದ್ದುಪಡಿಯಂತೆ ಒಟ್ಟು ಸಚಿವರ ಸಂಖ್ಯೆ 40 ಮೀರುವಂತಿಲ್ಲ. ಈಗಿನ ಸ್ಥಿತಿಯಲ್ಲಿ ಮಂತ್ರಿಗಳ ಸಂಖ್ಯೆ 62ರಷ್ಟಿತ್ತು. ಇದನ್ನು ಸರಿಪಡಿಸುವ ಉದ್ದೇಶದಿಂದ ಸಂಪುಟವನ್ನು ಪುನಾರಚಿಸುವ ಅಧಿಕಾರವನ್ನು ಆಡಳಿತಾರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪ್ರಧಾನಿ ಯೂಸುಫ್ ರೆಝಾ ಗಿಲಾನಿಯವರಿಗೆ ನೀಡಿತ್ತು.

ಪುನಾರಚನೆಗೊಳ್ಳುವ ಮಂತ್ರಿ ಮಂಡಲದಲ್ಲಿ ಶೇಕಡಾ 25ರಷ್ಟು ಮಂದಿ ಸೆನಟ್‍ನ ಸದಸ್ಯರಿರಬೇಕಾಗುತ್ತದೆ. ಹಾಗೆಯೇ ಉಳಿದವರನ್ನು ರಾಷ್ಟ್ರೀಯ ಅಸೆಂಬ್ಲಿ ಸದಸ್ಯರಿಂದ ಆರಿಸಿಕೊಳ್ಳಲಾಗುತ್ತದೆ. ಇಂದು ನಡೆದ ಸಂಪುಟದ ಕೊನೆಯ ಸಭೆಯ ನಂತರ ಎಲ್ಲಾ ಮಂತ್ರಿಗಳೂ ತಮ್ಮ ರಾಜೀನಾಮೆಗಳನ್ನು ನೀಡಿದರೆಂದು ಜಿಯೋ ನ್ಯೂಸ್ ವರದಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.