
ಪ್ರಜಾವಾಣಿ ವಾರ್ತೆವಾಷಿಂಗ್ಟನ್(ಪಿಟಿಐ): ಅಫ್ಘಾನಿಸ್ತಾನದ ವಿಚಾರದಲ್ಲಿ ಪಾಕಿಸ್ತಾನದ ನಡೆ ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿರುವ ಅಮೆರಿಕ, ಉಗ್ರರ ದಮನಕ್ಕೆ, ಅದರಲ್ಲೂ ಪ್ರಮುಖವಾಗಿ ಹಖಾನಿ ಉಗ್ರರ ಜಾಲವನ್ನು ನಿಯಂತ್ರಿಸಲು ಅದು ವಿಫಲವಾಗಿದೆ ಎಂದು ದೂರಿದೆ.
ಪಾಕಿಸ್ತಾನ ಉಗ್ರರ ಸ್ವರ್ಗವಾಗಿದೆ. ಅಲ್ಲಿಂದ ಕಾರ್ಯಚಟುವಟಿಕೆ ನಡೆಸುವ ಭಯೋತ್ಪಾದಕ ಸಂಘಟನೆಗಳು ಮುಖ್ಯವಾಗಿ ಆಫ್ಘಾನಿಸ್ತಾನ ಭದ್ರತೆಯನ್ನು ಹಾಳು ಮಾಡುತ್ತಿವೆ. ಅಲ್ಲದೇ ಅಂತರ ರಾಷ್ಟ್ರೀಯ ನೆರವು ಪಡೆಗಳಿಗೆ ಬೆದರಿಕೆಯನ್ನು ಒಡ್ಡುತ್ತಿವೆ ಎಂದು ಅಮೆರಿಕ ಆಕ್ಷೇಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.