ADVERTISEMENT

ಪಾಕ್: ಲಘು ಭೂಕಂಪನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ  ಪಂಜಾಬ್, ಖೈಬರ್ ಫಕ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ಲಘು ಭೂಕಂಪನ ಸಂಭವಿಸಿದೆ.

ರಿಕ್ಟರ್‌ಮಾಪನದಲ್ಲಿ ಕಂಪನದ ತೀವ್ರತೆ 5.5ರಷ್ಟು ದಾಖಲಾಗಿದೆ. ಲಾಹೋರ್, ಜೇಲುಂ, ಮನ್‌ಸೆಹ್ರಾ, ಅಬೋಟಾಬಾದ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಕೆಲ ಪಟ್ಟಣಗಳಲ್ಲಿ ಕೂಡ ಕಂಪನದ ಅನುಭವವಾಗಿದ್ದು, ಯಾವುದೇ ಹಾನಿಯ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.