
ಪ್ರಜಾವಾಣಿ ವಾರ್ತೆದುಬೈ (ಪಿಟಿಐ): ಭಾರತ ಹಾಗೂ ಚೀನಾದಂತಹ ಅಭಿವೃದ್ಧಿಶೀಲ ದೇಶಗಳ ಪುನರ್‌ಬಳಕೆ ಇಂಧನ ಉದ್ಯಮದಲ್ಲಿ ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಪುನರ್ ಬಳಕೆ ಇಂಧನ ಸಂಸ್ಥೆಗಳ ಖ್ಯಾತ ಉದ್ಯಮಿಗಳು ಸಮಾಲೋಚನೆ ನಡೆಸಿದರು.
ಜಗತ್ತಿನಲ್ಲಿ ಭವಿಷ್ಯದ ಇಂಧನದ ಕುರಿತ ಶೃಂಗಸಭೆಯಲ್ಲಿ ಪಾಲ್ಗೊಂಡ ಉದ್ಯಮಿಗಳು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಅಲ್ಲದೇ, ಈ ಅಧಿವೇಶನದಲ್ಲಿ ಭಾರತ, ಚೀನಾ ಹಾಗೂ ಬ್ರೆಜಿಲ್‌ನಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪುನರ್‌ಬಳಕೆ ಇಂಧನದ ಮೇಲೆ ಹೂಡಿಕೆ ಮಾಡುವ ಗುಣಾತ್ಮಕ ದೃಷ್ಟಿಕೋನ ಕುರಿತು ಚರ್ಚೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.