ಲಂಡನ್ (ಐಎಎನ್‌ಎಸ್): ಬೆಳಕಿನಲ್ಲಿ ರತಿಕ್ರೀಡೆ ನಡೆಸುವುದು ಬಹುತೇಕ ಪುರುಷರಿಗೆ ಇಷ್ಟವಾಗುವುದಿಲ್ಲ, ಕಾಮಕೂಟಕ್ಕೆ ಕತ್ತಲು ಇದ್ದರೇನೆ ಚೆನ್ನ. ಅದ್ಯಾಕೆ ಹೀಗೆ ಎಂಬುದನ್ನು ತಿಳಿಯುವ ಯತ್ನವನ್ನು ಬಹುಶಃ ಇದುವರೆಗೆ ಯಾರೂ ಮಾಡಿರಲಿಕ್ಕಿಲ್ಲ, ಈ ಬಗ್ಗೆ ನಡೆಸಿದ ಹೊಸ ಸಂಶೋಧನೆಯೊಂದು ಈ ಕುತೂಹಲದ ಮೇಲೆ ಬೆಳಕು ಚೆಲ್ಲಿದೆ.
ರತಿಕ್ರೀಡೆಯಲ್ಲಿ ತೊಡಗಿದಾಗ ತನ್ನ ಡೊಳ್ಳು ಹೊಟ್ಟೆಯನ್ನು ಸಂಗಾತಿಗೆ ತೋರಿಸುವುದು ಗಂಡಸಿಗೆ ಮುಜುಗರದ ಸಂಗತಿ. ಹಾಗಾಗಿ ಆತ ಕತ್ತಲನ್ನೇ ಆಯ್ದು ಕೊಳ್ಳುತ್ತಾನೆ ಎಂದು ಬ್ರಿಟನ್ ‘ಡಯಟ್ ಚೆಫ್’ ಸಂಸ್ಥೆಯ ವರದಿ ತಿಳಿಸಿದೆ.
20ರಿಂದ30 ಪ್ರಾಯದೊಳಗಿನ 1,077 ಬ್ರಿಟನ್ ಪುರುಷರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದ್ದು ಇವರಲ್ಲಿ ಬಹುತೇಕರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಸಂದರ್ಭ ತಮ್ಮ ದೇಹ ಕಾಣಿಸದಂತೆ ಕತ್ತಲು ಪರಿಸರವನ್ನೇ ಆಯ್ದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಕಾಮಕೂಟದಲ್ಲಿ ತೊಡಗಿದ್ದಾಗ ಹೊಟ್ಟೆಯದ್ದೇ ದೊಡ್ಡ ಸಮಸ್ಯೆ, ಇಡೀ ದೇಹದಲ್ಲಿ ಅತಿ ಕಡಿಮೆ ಆದ್ಯತೆ ಕೊಡುವ ಭಾಗ ಇದೇ ಆಗಿದೆ ಎಂದು ಶೇ 64 ರಷ್ಟು ಬ್ರಿಟಿಷ್ ಜನ ತಿಳಿಸಿದ್ದರೆ, ತಾವು ಹೆಚ್ಚು ತೂಕ ಹೊಂದಿದ್ದೇವೆ ಎಂದು ಶೇ 45 ರಷ್ಟು ಜನರು ತಿಳಿಸಿದರು.
ಲೈಂಗಿಕತೆ ಕುರಿತು ಈಚೆಗೆ ಜಾಗತಿಕ ಕಾಂಡೊಮ್ ಕಂಪೆನಿ ಡ್ಯೂರೆಕ್‌್ಸ ಈ ವಾರ ಸಮೀಕ್ಷಾ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಸಂಗಾತಿಗಳ ನಡುವಣ ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ತಂತ್ರಜ್ಞಾನದ ಬಳಕೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.