ಪೇಶಾವರ (ಪಿಟಿಐ): ಪೋಲಿಯೊ ಕಾರ್ಯಕರ್ತನೊಬ್ಬ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ವಾಯವ್ಯ ಭಾಗದ ಹಿಂಸಾಪೀಡಿತ ಪ್ರದೇಶಕ್ಕೆ ಔಷಧಗಳನ್ನು ಸಾಗಿಸುತ್ತಿದ್ದಾಗ ದಾಳಿ ನಡೆದಿದೆ. ಮೃತನನ್ನು ಗಾಲಿಬ್ ಎಂದು ಗುರುತಿಸಲಾಗಿದೆ.
‘ದಾಳಿಗೊಳಗಾದ ವ್ಯಕ್ತಿಯ ಪಕ್ಕಬಂದೂಕುಧಾರಿಗಳು ಪತ್ರವೊಂದನ್ನು ಬಿಟ್ಟು ಹೋಗಿದ್ದು, ಸರ್ಕಾರೇತರ ಸಂಸ್ಥೆ ಪರ ಪೋಲಿಯೋ ಅಭಿಯಾನ ನಡೆಸುವ ವರನ್ನು ಇದೇ ರೀತಿ ಗುರಿಯಾಗಿಸಲಾಗುವುದು ಎಂದು ಬರೆಯಲಾಗಿದೆ’ ಎಂದು ಸ್ಥಳೀಯ ಆಡಳಿತಾಧಿಕಾರಿ ಜಹಾಂಗೀರ್ ಆಜಮ್ ವಜೀರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.