ADVERTISEMENT

ಪ್ರತಿ ವರ್ಷ ಬಾರ್ಬಿ ಗೊಂಬೆ!

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ವಾಷಿಂಗ್ಟನ್ (ಪಿಟಿಐ): `ನಾನು ಚಿಕ್ಕವಳಿದ್ದಾಗ ಪ್ರತಿ ವರ್ಷ ಕ್ರಿಸ್‌ಮಸ್‌ಗೂ ಹೊಸದೊಂದು ಬಾರ್ಬಿ ಗೊಂಬೆಯನ್ನು ಉಡುಗೊರೆಯಾಗಿ ಪಡೆಯುತ್ತಿದ್ದೆ. ನನಗೆ ಬಾರ್ಬಿ ಗೊಂಬೆಗಳು ಅಚ್ಚುಮೆಚ್ಚು' ಎಂದು ಅಮೆರಿಕದ ಪ್ರಥಮ ಮಹಿಳೆ ಮಿಶೆಲ್ ಒಬಾಮ ಮಕ್ಕಳೊಂದಿಗೆ ತಮ್ಮ ಬಾಲ್ಯದ ಕ್ರಿಸ್‌ಮಸ್ ಆಚರಣೆಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಕುಟುಂಬದೊಂದಿಗೆ ಹವಾಯಿ ದ್ವೀಪದಲ್ಲಿ ಕ್ರಿಸ್‌ಮಸ್ ಆಚರಣೆಗೆ ತೆರಳಿರುವ ಅವರು, ಕ್ರಿಸ್‌ಮಸ್ ಮುನ್ನ ದಿನ ಮಕ್ಕಳೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.