ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ ಸರ್ಕಾರವು ಶಾಲೆಗಳಲ್ಲಿ ಹಿಂದಿ ಮತ್ತು ಮ್ಯಾಂಡರಿನ್ ಭಾಷೆಗಳನ್ನು ಕಲಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದ ಬೆನ್ನಲ್ಲಿಯೇ, ಏಷ್ಯಾ ಭಾಷೆಗಳನ್ನಾಡುವವರಿಗೆ ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿ ಕಲ್ಪಿಸುವಂತೆ ಮಾಜಿ ಪ್ರಧಾನಿ ಕೆವಿನ್ ರುಡ್ ಅವರು ಔದ್ಯಮಿಕ ವಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಶಾಲೆಗಳಲ್ಲಿ ಏಷ್ಯಾದ ಭಾಷೆಗಳನ್ನು ಕಲಿಸುವ ಸರ್ಕಾರದ ನಿರ್ಧಾರವು ಏಷ್ಯಾ ಖಂಡದೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಹಿಂದಿ ಸೇರಿದಂತೆ ಏಷ್ಯಾ ದೇಶಗಳ ಭಾಷೆಗಳನ್ನು ಕಲಿಸುವ ಅಗತ್ಯ ಕುರಿತಂತೆ ಫೆಡರಲ್ ಸರ್ಕಾರ ಶ್ವೇತಪತ್ರ ಹೊರಡಿಸಿದ ಕೆಲವು ದಿನಗಳ ಬಳಿಕ ರುಡ್ ಈ ಸಲಹೆ ಮಾಡಿದ್ದಾರೆ. ಏಷ್ಯಾದ ಮ್ಯಾಂಡರಿನ್, ಜಪಾನ್, ಹಿಂದಿ ಮತ್ತು ಇಂಡೋನೇಷ್ಯಾ ಭಾಷೆಗಳಲ್ಲಿ ಕನಿಷ್ಠ ಯಾವುದಾದರೂ ಒಂದನ್ನು ಕಲಿಸುವಂತೆ ಶ್ವೇತಪತ್ರದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.