ADVERTISEMENT

ಫುಕುಶಿಮಾದಲ್ಲಿ ಮತ್ತೆ ಭೂಕಂಪ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಟೋಕಿಯೊ (ಐಎಎನ್‌ಎಸ್):  ಜಪಾನಿನ ಹೊನ್ಸು ನಡುಗಡ್ಡೆಯ ಫುಕುಶಿಮಾ ಕಡಲತೀರ ಪ್ರದೇಶದಲ್ಲಿ ಭಾನುವಾರ ಭೂಕಂಪನವುಂಟಾಗಿದೆ ಎಂದು ಅಲ್ಲಿಯ ಹವಾಮಾನ ಸಂಸ್ಥೆ ತಿಳಿಸಿದೆ.

ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.9 ರಷ್ಟು ಇತ್ತು. ಆದರೆ ಯಾವುದೇ ಜೀವಹಾನಿ ಬಗ್ಗೆ ವರದಿಯಾಗಿಲ್ಲ. ಟೋಕಿಯೊ ನಗರದಲ್ಲೂ ಭೂಕಂಪನದ ಅನುಭವವಾಗಿದ್ದು, ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.