ನ್ಯೂಯಾರ್ಕ್ (ಪಿಟಿಐ): ಐಸಿಐಸಿಐ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೊಚ್ಚಾರ್, ಬಯೊಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಶಾ, ಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಸೇರಿದಂತೆ ಒಂಬತ್ತು ಭಾರತೀಯ ಮಹಿಳೆಯರು ಫೋಬ್ಸ್ ನಿಯತಕಾಲಿಕದ `ಏಷ್ಯಾದ ಶಕ್ತಿಶಾಲಿ ಮಹಿಳಾ ಉದ್ಯಮಿಗಳು~ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬ್ರಿಟಾನಿಯಾ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕಿ ವಿನಿತಾ ಬಾಲಿ, ಹಿಂದುಸ್ತಾನ್ ಟೈಮ್ಸನ ಶೋಭನಾ ಭಾರ್ತಿಯಾ, ಎಝಡ್‌ಬಿಯ ಜಿಯಾ ಮೋದಿ, ಆಕ್ಸಿಸ್ ಬ್ಯಾಂಕ್‌ನ ಸಿಇಒ ಶಿಖಾ ಶರ್ಮ, ಟ್ರಾಕ್ಟರ್ಸ್ ಅಂಡ್ ಫಾರ್ಮ್ ಎಕ್ವಿಪ್‌ಮೆಂಟ್ ಅಧ್ಯಕ್ಷೆ ಮಲ್ಲಿಕಾ ಶ್ರೀನಿವಾಸ, ಎಚ್‌ಸಿಎಲ್ ಕಾರ್ಪೊರೇಟ್ ಕಾರ್ಯಕಾರಿ ನಿರ್ದೇಶಕಿ ರೋಶನಿ ನಾಡಾರ್ ಮಲ್ಹೋತ್ರ 50 ಜನರಿರುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಭಾರತೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.