ADVERTISEMENT

ಫ್ರಾನ್ಸ್‌: ರಾಯಭಾರ ಕಚೇರಿ ಬಳಿ ದಾಳಿ

ಏಜೆನ್ಸೀಸ್
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಔಗಾಡೌಗೊದಲ್ಲಿರುವ ಫ್ರೆಂಚ್‌ ರಾಯಭಾರಿ ಕಚೇರಿ, ಫ್ರೆಂಚ್‌ ಸಾಂಸ್ಕೃತಿಕ ಕೇಂದ್ರ ಮತ್ತು ಸೇನಾ ಮುಖ್ಯ ಕಚೇರಿ ಬಳಿ ಸಂಭವಿಸಿದ ಸ್ಫೋಟದಿಂದ ಸುತ್ತಮುತ್ತ ಪ್ರದೇಶದಲ್ಲಿ ಹೊಗೆ ಆವರಿಸಿಕೊಂಡಿತ್ತು. –ಎಎಫ್‌ಪಿ ಚಿತ್ರ
ಔಗಾಡೌಗೊದಲ್ಲಿರುವ ಫ್ರೆಂಚ್‌ ರಾಯಭಾರಿ ಕಚೇರಿ, ಫ್ರೆಂಚ್‌ ಸಾಂಸ್ಕೃತಿಕ ಕೇಂದ್ರ ಮತ್ತು ಸೇನಾ ಮುಖ್ಯ ಕಚೇರಿ ಬಳಿ ಸಂಭವಿಸಿದ ಸ್ಫೋಟದಿಂದ ಸುತ್ತಮುತ್ತ ಪ್ರದೇಶದಲ್ಲಿ ಹೊಗೆ ಆವರಿಸಿಕೊಂಡಿತ್ತು. –ಎಎಫ್‌ಪಿ ಚಿತ್ರ   

ಔಗಾಡೌಗೊ: ಬುರ್ಕಿನಾ ಫಾಸೊ ರಾಜಧಾನಿ ಔಗಾಡೌಗೊದಲ್ಲಿರುವ ಫ್ರೆಂಚ್‌ ರಾಯಭಾರಿ ಕಚೇರಿ, ಫ್ರೆಂಚ್‌ ಸಾಂಸ್ಕೃತಿಕ ಕೇಂದ್ರ ಮತ್ತು ಸೇನಾ ಮುಖ್ಯ ಕಚೇರಿ ಬಳಿ ಶುಕ್ರವಾರ ದಾಳಿ ನಡೆದಿದೆ.

ನಗರದ ಹೃದಯಭಾಗದಲ್ಲಿ ಈ ಕಚೇರಿಗಳಿವೆ. ಕಾರಿನಲ್ಲಿ ಬಂದ ಐವರು ಶಸ್ತ್ರಾಸ್ತ್ರಧಾರಿಗಳು ನಾಗರಿಕರ ಮೇಲೆ ಮನಬಂದಂತೆ ದಾಳಿ ನಡೆಸಿ ಈ ಕಚೇರಿಗಳತ್ತ ಧಾವಿಸಿದರು. ಆಗ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಜತೆ ಗುಂಡಿನ ಚಕಮಕಿ ನಡೆಯಿತು. ಶಸ್ತ್ರಾಸ್ತ್ರಧಾರಿಗಳ ಕಾರು ಬೆಂಕಿಗೆ ಆಹುತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇನಾ ಮುಖ್ಯ ಕಚೇರಿ  ಮತ್ತು ಫ್ರೆಂಚ್‌ ಸಾಂಸ್ಕೃತಿಕ ಕೇಂದ್ರದ ಬಳಿ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸ್ಥಳದಲ್ಲಿ ಪೊಲೀಸ್‌ ಮತ್ತು ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಾರ್ಕಿನೊ ಫಾಸೊದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿವೆ. ಕಳೆದ ವರ್ಷ ಆಗಸ್ಟ್‌ 13ರಂದು ನಡೆದ ಭಯೋತ್ಪಾದಕರ ದಾಳಿಯಲ್ಲಿ 19 ಮಂದಿ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.