ADVERTISEMENT

ಫ್ಲೊರಿಡಾದ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ: 5 ಸಾವು

ಏಜೆನ್ಸೀಸ್
Published 7 ಜನವರಿ 2017, 4:14 IST
Last Updated 7 ಜನವರಿ 2017, 4:14 IST
ಗುಂಡಿನ ದಾಳಿಯ ಭೀತಿಯಿಂದ ಓಡಿದ ಪ್ರಯಾಣಿಕರು  –ಎಎಫ್‌ಪಿ ಚಿತ್ರ
ಗುಂಡಿನ ದಾಳಿಯ ಭೀತಿಯಿಂದ ಓಡಿದ ಪ್ರಯಾಣಿಕರು –ಎಎಫ್‌ಪಿ ಚಿತ್ರ   
ಫ್ಲೊರಿಡಾ: ಅಮೆರಿಕದ ಫ್ಲೊರಿಡಾದ ಫೋರ್ಟ್‌ ಲೌಡರ್ಡೇಲ್‌ ವಿಮಾನ ನಿಲ್ದಾಣದಲ್ಲಿ ಬಂದೂಕುಧಾರಿಯೊಬ್ಬ ಶುಕ್ರವಾರ (ಸ್ಥಳೀಯ ಕಾಲಮಾನ) ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ.
 
ವಿಮಾನ ನಿಲ್ದಾಣದ ಲಗೇಜ್‌ ಇಳಿಸಿಕೊಳ್ಳುವ ಪ್ರದೇಶದಲ್ಲಿ (Baggage claim area) ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಿದ್ದಾನೆ. 
 
ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿಕೋರ ಅಲಾಸ್ಕಾ ಮೂಲದ ಎಸ್ಟೆಬನ್‌ ಸ್ಯಾಂಟಿಯಾಗೊ (26) ಎಂದು ಗುರುತಿಸಲಾಗಿದೆ. ಈತ ಇರಾಕ್‌ನ ನ್ಯಾಷನಲ್‌ ಗಾರ್ಡ್‌ನಲ್ಲಿ ಸೈನಿಕನಾಗಿದ್ದ. ಸೇವೆ ತೃಪ್ತಿದಾಯಕವಾಗಿಲ್ಲ ಎಂಬ ಕಾರಣ ನೀಡಿ ಕಳೆದ ವರ್ಷ ಈತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಎನ್ನಲಾಗಿದೆ.
 
ಎಸ್ಟೆಬನ್‌ ಸ್ಯಾಂಟಿಯಾಗೊ ಮನೋರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಆತನ ಸಹೋದರ ತಿಳಿಸಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ತನ್ನನ್ನು ಕೆಲಸದಿಂದ ತೆಗೆದು ಹಾಕಿದ ಕಾರಣಕ್ಕೆ ಈತ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ. ಆದರೆ, ಈ ದಾಳಿಗೆ ಕಾರಣವೇನು ಎಂಬ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.