ADVERTISEMENT

ಬಂಡುಕೋರರ ಬಲೆಯೊಳಗೆ ಗಡಾಫಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಟ್ರಿಪೋಲಿ (ಎಪಿ): ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರನ್ನು ಸುತ್ತುವರೆದಿರುವುದಾಗಿ ಬಂಡುಕೋರರು ಹೇಳಿಕೊಂಡಿದ್ದಾರೆ.

ಇನ್ನು ಕೆಲವೇ ಸಮಯದಲ್ಲಿ ಅವರನ್ನು ಸೆರೆ ಹಿಡಿಯಲಾಗುವುದು ಇಲ್ಲವೇ ಕೊಲ್ಲಲಾಗುವುದು ಎಂದು ಟ್ರಿಪೋಲಿಯ ಹೊಸ ಮಿಲಿಟರಿ ಕೌನ್ಸಿಲ್ ಹೇಳಿದೆ.  ಇಲ್ಲಿಂದ ಕೇವಲ 40 ಮೈಲು ಅಂತರದಲ್ಲಿ ಗಡಾಫಿ ಇದ್ದು,  ಬಂಡುಕೋರರು ಸುತ್ತುವರೆದಿದ್ದಾರೆ. ಹಾಗಾಗಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ.

ಗಡಾಫಿ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬೇಹುಗಾರಿಕೆ ಸಂಸ್ಥೆಯ ನೆರವು ಪಡೆಯಲಾಗಿದೆ ಎಂದೂ ಕೌನ್ಸಿಲ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.