ADVERTISEMENT

ಬಂಧನಕ್ಕೆ ಆದೇಶ: ಕೋರ್ಟ್‌ನಿಂದ ಮುಷರಫ್ ಪರಾರಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 10:05 IST
Last Updated 18 ಏಪ್ರಿಲ್ 2013, 10:05 IST
ಅಂಗರಕ್ಷಕರ ಬೆಂಗಾವಲಿನಲ್ಲಿ ಕೋರ್ಟ್ ಆವರಣದಿಂದ ಗಡಿಬಿಡಿಯಲ್ಲಿ ಹೊರಸಾಗುತ್ತಿರುವ ಮುಷರಫ್ ಅವರಿದ್ದ ಕಪ್ಪು ಬಣ್ಣದ ವಾಹನ. (ಒಳಚಿತ್ರದಲ್ಲಿ ಮುಷರಪ್)  ಎಎಫ್‌ಪಿ ಚಿತ್ರ.
ಅಂಗರಕ್ಷಕರ ಬೆಂಗಾವಲಿನಲ್ಲಿ ಕೋರ್ಟ್ ಆವರಣದಿಂದ ಗಡಿಬಿಡಿಯಲ್ಲಿ ಹೊರಸಾಗುತ್ತಿರುವ ಮುಷರಫ್ ಅವರಿದ್ದ ಕಪ್ಪು ಬಣ್ಣದ ವಾಹನ. (ಒಳಚಿತ್ರದಲ್ಲಿ ಮುಷರಪ್) ಎಎಫ್‌ಪಿ ಚಿತ್ರ.   

ಇಸ್ಲಾಮಾಬಾದ್ (ಐಎಎನ್‌ಎಸ್): ತಮ್ಮ ಜಾಮೀನು ವಿಸ್ತರಣೆ ಮಾಡಬೇಕೆಂದು ಕೋರಲು ಹೈಕೋರ್ಟ್‌ಗೆ ಆಗಮಿಸಿದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಹೈಕೋರ್ಟ್ ಜಾಮೀನು ವಿಸ್ತರಣೆ ಅರ್ಜಿಯನ್ನು ವಜಾಗೊಳಿಸಿ ಬಂಧನಕ್ಕೆ ಆದೇಶಿಸುತ್ತಿದ್ದಂತೆ ಕೋರ್ಟ್‌ನ ಆವರಣದಿಂದ ಪರಾರಿಯಾದ ಘಟನೆ ಗುರುವಾರ ನಡೆದಿದೆ.

2007ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನ್ಯಾಯಾಧೀಶರನ್ನು ವಜಾಗೊಳಿಸಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷರಫ್ ಬಂಧನಕ್ಕೆ ಆದೇಶಿಸಿದ ಇಸ್ಲಾಮಾಬಾದ್ ಹೈಕೋರ್ಟ್ ಅವರ ಮಧ್ಯಂತರ ಜಾಮೀನು ವಿಸ್ತರಣೆ ಮನವಿಯನ್ನು ತಳ್ಳಿಹಾಕಿದೆ ಎಂದು ಜಿಯೋ ಸುದ್ದಿಸಂಸ್ಥೆ ವರದಿ ಮಾಡಿದೆ.

ಜಾಮೀನು ವಿಸ್ತರಣೆ ಮನವಿ ಸಲ್ಲಿಸಲು ತಮ್ಮ ಅಂಗರಕ್ಷಕರೊಂದಿಗೆ ಮುಷರಫ್ ಅವರು ಕೋರ್ಟ್‌ಗೆ ಆಗಮಿಸಿದ್ದರು. ಆದರೆ ಕೋರ್ಟ್ ಅವರ ಅರ್ಜಿ ತಿರಸ್ಕರಿಸಿ, ಬಂಧನಕ್ಕೆ ಆದೇಶಿಸಿತು. ಬಂಧನದ ಆದೇಶ ಹೊರಡುತ್ತಿದ್ದಂತೆ ಕೋರ್ಟ್ ಆವರಣದಿಂದ ಗಡಿಬಿಡಿಯಲ್ಲಿ ಅಂಗರಕ್ಷಕ ಬೆಂಗಾವಲಿನೊಂದಿಗೆ ಹೊರನಡೆದ ಮುಷರಫ್ ಅವರು ಅಲ್ಲಿಂದ ಕಪ್ಪು ಬಣ್ಣದ ವಾಹನದಲ್ಲಿ ಪರಾರಿಯಾದರು.

ಈ ಹಿಂದಿನ ವಿಚಾರಣೆಯಲ್ಲಿ ಹೈಕೋರ್ಟ್ ಮುಷರಫ್ ಅವರ ಮಧ್ಯಂತರ ಜಾಮೀನನ್ನು ಏಪ್ರಿಲ್ 18ರ ವರೆಗೆ ವಿಸ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.