ADVERTISEMENT

ಬಾಂಬ್‌ ಸ್ಫೋಟ: 19 ಸಾವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಪೆಶಾವರ (ಪಿಟಿಐ): ವಾಯವ್ಯ ಪಾಕಿಸ್ತಾನದ ಖೈಬರ್‌ ಪಕ್ತುಂನ್ಕ್ವ ಪ್ರಾಂತ್ಯ ಮತ್ತು ಕ್ವೆಟ್ಟಾದಲ್ಲಿ ಬಾಂಬ್‌ ಸ್ಫೋಟದ ಎರಡು ಪ್ರತ್ಯೇಕ ಘಟನೆಗಳಲ್ಲಿ  ಶುಕ್ರವಾರ ಕನಿಷ್ಠ ೧೯ ಮಂದಿ ಸತ್ತು ೬೦ ಮಂದಿ  ಗಾಯ­ಗೊಂಡಿದ್ದಾರೆ.

ಗಾಯಗೊಂಡ­ವ­ರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ. ಖೈಬರ್‌ ಪಕ್ತುಂನ್ಕ್ವದಲ್ಲಿ ಪೊಲೀಸ್‌ ವಾಹನ ಗುರಿಯಾಗಿಸಿ­ಕೊಂಡು ನಡೆದ ಆತ್ಮ­ಹತ್ಯಾ ಬಾಂಬ್‌ ದಾಳಿಯಲ್ಲಿ  ೯ ಜನರು ಸತ್ತಿದ್ದರೆ ಕ್ವೆಟ್ಟಾದಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ ೧೦ ಮಂದಿ ಸತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.