ಬಾಗ್ದಾದ್ (ಐಎಎನ್‌ಎಸ್): ಇರಾಕ್‌ನ ವಿವಿಧ ಭಾಗಗಳಲ್ಲಿರುವ ಮೂರು ಶಿಯಾ ಮಸೀದಿಗಳ ಬಳಿ ಮಂಗಳವಾರ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು, ಒಟ್ಟು 19 ಜನರು ಮೃತಪಟ್ಟು 72 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್-ಶು ಜಿಲ್ಲೆಯ ಶಿಯಾ ಮಸೀದಿಯೊಂದರ ಸಮೀಪ ಬಾಂಬ್ ಸ್ಫೋಟ ನಡೆದಿದ್ದು ಎಂಟು ಜನರು ಮೃತಪಟ್ಟು, 21 ಜನರು ಗಾಯಗೊಂಡಿದ್ದಾರೆ. ಬಾಗ್ದಾದ್‌ನ ಮತ್ತೊಂದು ಸ್ಥಳದಲ್ಲಿರುವ ಶಿಯಾ ಮಸೀದಿಯ ಬಳಿ ಸಂಭವಿಸಿದ ಸ್ಫೋಟದಲ್ಲೂ ಆರು ಜನರು ಮೃತಪಟ್ಟು, 32 ಜನರು ಗಾಯಗೊಂಡಿದ್ದಾರೆ. ಹುರಿಯಾ ಜಿಲ್ಲೆಯ ಮಸೀದಿ ಬಳಿ ದುಷ್ಕರ್ಮಿಗಳು ಬಾಂಬ್ ಸ್ಫೋಟ ನಡೆಸಿದ್ದು ಐದು ಜನರು ಸಾವನ್ನಪ್ಪಿ, 19 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.