ADVERTISEMENT

ಬೇಟೆಗೆ 5 ಲಕ್ಷ ವರ್ಷಗಳ ಇತಿಹಾಸ!

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST

ಲಂಡನ್ (ಪಿಟಿಐ):  ಈ ಮೊದಲು ಊಹಿಸಿದ್ದಕ್ಕಿಂತಲೂ 2 ಲಕ್ಷ ವರ್ಷಗಳ ಮೊದಲೇ ಆದಿ ಮಾನವ ಚೂಪಾದ ಕಲ್ಲಿನ ತುದಿಯನ್ನು ಹೊಂದಿದ ಭರ್ಜಿ ಬಳಸಿ ಬೇಟೆಯಾಡುತ್ತಿದ್ದ ಎಂಬ ಸಂಗತಿಯನ್ನು ಹೊಸ ಅಧ್ಯಯನ ಬಹಿರಂಗಪಡಿಸಿದೆ.

ನಮ್ಮ ಪೂರ್ವಜರು 5 ಲಕ್ಷ ವರ್ಷಗಳ ಹಿಂದೆಯೇ ಚೂಪಾದ ಕಲ್ಲಿನ ವೊನೆಗಳನ್ನು ಹೊಂದಿದ್ದ ಈಟಿ ಬಳಸಿ ಬೇಟೆಯಾಡುತ್ತಿದ್ದರು ಎಂಬುದನ್ನು ಅಡ್ಡಬಿಲ್ಲು ಮತ್ತು ಸತ್ತಿರುವ ಹಾರುವ ಜಿಂಕೆಯ ದೇಹದ ನೆರವಿನಿಂದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ಎಂದು `ಡೈಲಿ ಮೇಲ್~ ವರದಿ ಮಾಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.