ADVERTISEMENT

ಬ್ರಿಟನ್ ವಿವಾಹ ಕಾಯ್ದೆ ತಿದ್ದುಪಡಿ: ಮಧ್ಯರಾತ್ರಿಯೂ ಮದುವೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಲಂಡನ್ (ಪಿಟಿಐ):  ಸುಮಾರು 175 ವರ್ಷಗಳಿಂದ ವಿವಾಹಕ್ಕೆ ಸಂಬಂಧಿಸಿದಂತೆ ನಡೆದುಕೊಂಡು ಬಂದ `ನಿಗದಿತ ಸಮಯ~ದ ನಿಯಮಕ್ಕೆ ಬ್ರಿಟನ್‌ನಲ್ಲಿ ಈಗ ತೆರೆ ಬಿದ್ದಿದೆ. ಇದರಿಂದಾಗಿ ಇನ್ನು ಮುಂದೆ ಅಲ್ಲಿ ಮಧ್ಯರಾತ್ರಿಯಲ್ಲೂ ವಿವಾಹಗಳು ನಡೆಯಬಹುದು.

1837ರ ಕಾಯ್ದೆಯ ಪ್ರಕಾರ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯುವ ಮದುವೆಗಳ ನೋಂದಣಿಯನ್ನು ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 8ರಿಂದ ಸಂಜೆ  6ರ ಒಳಗೆ ಮಾಡಬೇಕಿತ್ತು ಎಂದು ಬಿಬಿಸಿ ವರದಿ ಮಾಡಿದೆ.

ದಿನದ ಯಾವುದೇ ಸಮಯದಲ್ಲಿ ಸಾರ್ವಜನಿಕರು ಐತಿಹಾಸಿಕ ತಾಣಗಳಲ್ಲಿ ಮಧ್ಯರಾತ್ರಿ ವಿವಾಹ ಸಮಾರಂಭಗಳನ್ನು ಹಮ್ಮಿಕೊಳ್ಳಲು ಹೊಸ ಕಾಯ್ದೆ ಅವಕಾಶ ಕಲ್ಪಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.