ADVERTISEMENT

ಬ್ರಿಟನ್ ಸೇನೆಗೆ ಟಿಪ್ಪು, ಝಾನ್ಸಿ ಇಂದಿಗೂ ವೈರಿಗಳು!

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಲಂಡನ್ (ಪಿಟಿಐ): ಬ್ರಿಟನ್ ವಿರುದ್ಧ ಯುದ್ಧ ಗೆದ್ದ ಅಮೆರಿಕದ ಪ್ರಥಮ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಅವರನ್ನು ಬ್ರಿಟನ್ ಸೇನೆ ಇಂದಿಗೂ ತನ್ನ ಅತಿ ದೊಡ್ಡ ವೈರಿ ಎಂದು ಪರಿಗಣಿಸಿದೆ. ಹಾಗೇ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ `ಮೈಸೂರು ಹುಲಿ~ ಟಿಪ್ಪು ಸುಲ್ತಾನ್, ಝಾನ್ಸಿರಾಣಿ ಲಕ್ಷ್ಮಿಬಾಯಿ ಅವರನ್ನೂ ಅದು ವೈರಿಗಳೆಂದೇ ಭಾವಿಸಿದೆ.

ಬ್ರಿಟನ್‌ನ ರಾಷ್ಟ್ರೀಯ ಸೇನೆಯ ವಸ್ತುಸಂಗ್ರಹಾಲಯ ಸಿದ್ಧಪಡಿಸಿರುವ ಸಮೀಕ್ಷೆಯಲ್ಲಿ ಈ ಎಲ್ಲರ ಹೆಸರುಗಳೂ ಇವೆ. ಜಾರ್ಜ್ ವಾಷಿಂಗ್ಟನ್ ನಂತರ ಐರ್ಲೆಂಡ್ ನಾಯಕ ಮೈಕೆಲ್ ಕಾಲಿನ್ಸ್ ಎರಡನೇ ಸ್ಥಾನದಲ್ಲಿದ್ದು, ಫ್ರಾನ್ಸ್‌ನ ನೆಪೋಲಿಯನ್, ಜರ್ಮನ್‌ನ ಎರ‌್ವಿನ್ ರೋಮೆಲ್, ಟರ್ಕಿಯ ಸಂಸ್ಥಾಪಕ ಅಧ್ಯಕ್ಷ ಮುಸ್ತಫಾ ಅಟಾಟುರ್ಕ್ ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.